ಕೂಡಿಗೆ, ಮಾ. 17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ಹಣ ಸಂಗ್ರಹಣಾ ಸೇವಾ ಕೇಂದ್ರದಲ್ಲಿ 92 ಸಂಘಗಳ ಗುಣಮಟ್ಟ ಪರಿಶೀಲನೆಯ ಲೆಕ್ಕಪರಿಶೋಧನೆ ನಡೆಯಿತು.

ಕೂಡಿಗೆ ವಲಯದ ಕೂಡಿಗೆ ಒಕ್ಕೂಟ ಹಾಗೂ ವಿಜಯನಗರ ಒಕ್ಕೂಟದ ಪ್ರಗತಿಬಂಧು ಸ್ವಸಹಾಯ ಸಂಘಗಳ ಹಾಗೂ ಕೂಡಿಗೆ ಬಿ ಒಕ್ಕೂಟದ ಸಂಘಗಳ ಗುಣಮಟ್ಟದ ಪರಿಶೀಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಆಂತರಿಕ ಲೆಕ್ಕಪರಿಶೋಧಕಿ ಭಾವನಾ ರವಿಪ್ರಸಾದ್ ಸಂಘಗಳ ದಾಖಲಾತಿ ವ್ಯವಹಾರದ ಶಿಸ್ತು ವಾರದ ಸಭೆಯ ಹಾಜರಾತಿಗಳನ್ನು ಪರಿಶೀಲಿಸಿ ತಂಡಗಳಿಗೆ ಕಂಪ್ಯೂಟರೀಕೃತ ಗ್ರೇಡಿಂಗ್ ನೀಡಿದರು.

ಈ ಸಂದರ್ಭ ಎ ಶ್ರೇಣಿ ಹಾಗೂ ಓ+ ಶ್ರೇಣಿ ಪಡೆದುಕೊಂಡಿರುವ ಸಂಘಗಳಿಗೆ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಅಭಿನಂದಿಸಿದರು. ಬಿ ಶ್ರೇಣಿ ಬಂದಿರುವ ಸಂಘಗಳ ಗುಣಮಟ್ಟದ ಸುಧಾರಣೆಗೆ ಅವಶ್ಯ ಮಾಹಿತಿ ನೀಡಿದರು. ಆ ಮತ್ತು ಆ ಗ್ರೇಡ್ ಪಡೆದುಕೊಂಡ ಸಂಘಗಳ ತಪಾವತ್ತುಗಳಾದ ವಾರದ ಸಭೆಯಲ್ಲಿ ಹಾಜರಾತಿ ಕೊರತೆ, ಉಳಿತಾಯ ವ್ಯತ್ಯಾಸ, ಮರುಪಾವತಿಯಲ್ಲಿ ಕಂತು ಬಾಕಿ, ಸದಸ್ಯರ ಕೊರತೆ ಮುಂತಾದ ತಪಾವತ್ತುಗಳನ್ನು ಜನವರಿ ಅಂತ್ಯದೊಳಗೆ ಸರಿಪಡಿಸಿ ಮರು ಲೆಕ್ಕಪರಿಶೋಧನೆ ಮಾಡಿಸಿ ಉತ್ತಮ ಶ್ರೇಣಿ ಪಡೆದುಕೊಂಡು ಸದಸ್ಯರ ಬೇಡಿಕೆಗಳನ್ನು ಈಡೇರಿಸಲು ಸಹಕರಿಸುವಂತೆ ಸಲಹೆ ನೀಡಿದರು. ಹೆಬ್ಬಾಲೆ ವಲಯ ಮೇಲ್ವಿಚಾರಕ ವಿನೋದ್‍ಕುಮಾರ್, ಕೂಡಿಗೆ ಒಕ್ಕೂಟದ ಅಧ್ಯಕ್ಷೆ ಸುಮತಿ, ಸೇವಾ ಪ್ರತಿನಿಧಿ ಸುನಿತಾ ಹಾಗೂ ಲೆಕ್ಕ ಪರಿಶೋಧನೆಗೆ ಭಾಗವಹಿಸಿರುವ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.