ಮಡಿಕೇರಿ, ಮಾ. 17: ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಆಗಿ ಕಾರ್ಯುನಿರ್ವಹಿಸುತ್ತಿದ್ದ ಕೊಡಗಿನ ಮಾದಾಪುರದವರಾದ ಕೋದಂಡ ಪಿ. ಕಾರ್ಯಪ್ಪ ಅವರು ಇದೀಗ ಲೆಫ್ಟಿನೆಂಟ್ ಜನರಲ್ ಶ್ರೇಣಿಯ ಅಧಿಕಾರಿಯಾಗಿ ಪದೋನ್ನತಿ ಹೊಂದುತ್ತಿದ್ದಾರೆ. ಇವರ ಬಡ್ತಿ ಖಾತರಿಗೊಂಡಿದೆ. ಈ ತನಕ ಇವರು ನವದೆಹಲಿಯಲ್ಲಿ ಆರ್ಮಿ ಸೆರ್ಕೆಟರಿ ಫಾರ್ ಪ್ರೆಸಿಡೆಂಟ್ ಆಫ್ ಇಂಡಿಯಾ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.