ನಾಪೆÉÇೀಕ್ಲು, ಮಾ. 17 : 2019ನೇ ಕೊಡವ ಕುಟುಂಬಗಳ ನಡುವೆ ನಡೆಯುವ ಕೌಟುಂಬಿಕ ಹಾಕಿ ನಮ್ಮೆಯ ಸಾರಥ್ಯವನ್ನು ಹರಿಹರ ಮುಕ್ಕಾಟಿರ ಕುಟುಂಬದವರು ವಹಿಸಿದ್ದರು. ಆದರೆ 2018ರ ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪದ ಕಾರಣದಿಂದ ಕೊಡವ ಹಾಕಿ ಅಸೋಸಿಯೇಷನ್ ಹಾಗೂ ಕೊಡವ ಕುಟುಂಬಗಳ ವತಿಯಿಂದ ಹಾಕಿ ನಮ್ಮೆಯನ್ನು ಮುಂದೂಡಲು ಒಮ್ಮತ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಹಾಕಿ ಕೂರ್ಗ್ ಸಂಸ್ಥೆಯು ಏ. 14 ರಿಂದ ಚಾಂಪಿಯನ್ ಟ್ರೋಫಿ ನಡೆಸಲು ಕೊಡವ ತಂಡಗಳನ್ನು ಆಹ್ವಾನಿಸಿರುವದನ್ನು ಆಕ್ಷೇಪಿಸಿರುವ ನಾಪೆÉÇೀಕ್ಲು ಬೇತು ಗ್ರಾಮದ ಚೋಕಿರ ಕುಟುಂಬಸ್ಥರು ಕೊಡವ ಕೌಟುಂಬಿಕ ಹಾಕಿ ನಮ್ಮೆಯನ್ನು ಕೊಡವ ಕುಟುಂಬಗಳೇ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮ್ಮ ಐನ್ಮನೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಕುಟುಂಬಸ್ಥರು ಹರಿಹರ ಮುಕ್ಕಾಟಿರ ಕುಟುಂಬಸ್ಥರು ಹಾಕಿ ನಮ್ಮೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿಲ್ಲ. ಕೊಡಗಿನ ಕೊಡವ ಕುಟುಂಬಗಳ ತೀರ್ಮಾನದಂತೆ ನಮ್ಮ ಜನಾಂಗದವರು ಪ್ರಕೃತಿ ವಿಕೋಪದಿಂದ ಪ್ರಾಣ ಕಳೆದುಕೊಂಡ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಹಾಕಿ ಕೂರ್ಗ್ ಗಮನಕ್ಕೆ ಬಾರದಿರುವದು ವಿಷಾಧಕರ ಸಂಗತಿ ಎಂದು ಹೇಳಿದರು. ಇನ್ನು ಮುಂದೆಯಾದರೂ ಕೊಡವ ಕೌಟುಂಬಿಕ ಹಾಕಿ ನಮ್ಮೆಯನ್ನು ಕೊಡವ ಕುಟುಂಬದವರೇ ನಡೆಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಚೋಕಿರ ಪೆÇನ್ನಪ್ಪ, ಪೂವಯ್ಯ, ಉತ್ತಯ್ಯ, ನಂಜುಂಡ, ಸಜಿತ್, ಅಶೋಕ್ ಬಿದ್ದಪ್ಪ, ರೋಷನ್, ಮಧು, ಸುಧೀರ್, ಗಣೇಶ್, ಮುತ್ತಪ್ಪ, ಪ್ರಭು, ಪ್ರವೀಣ್, ರಾಣಿ ಬೋಪಯ್ಯ, ರತೀಶ್, ನಾಚಪ್ಪ, ದೀಪು, ದಿನು, ವಿಂದ್ಯಾ, ಶೈಲಾ, ಪ್ರೇಮ, ದಿವ್ಯ, ಅನಿತಾ, ಮತ್ತಿತರರು ಇದ್ದರು.