ಮಡಿಕೇರಿ: ಟಾಟಾ ಕಾಫಿ ಸಂಸ್ಥೆಯು ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿತು. ಸಂಸ್ಥೆಯ ಎಲ್ಲ ಪುರುಷ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳಿಗೆ ಶುಭಾಷಯವನ್ನು ವಿಶಿಷ್ಟ ರೀತಿಯಲ್ಲಿ ಹಾರೈಸುವದರ ಮೂಲಕ ಮಹಿಳೆಯರ ಪ್ರಸಕ್ತ ದಿನಗಳಲ್ಲಿನ ಕಾರ್ಯಕ್ಷೇತ್ರದಲ್ಲಿನ ಸಾಧನೆಯನ್ನು ಶ್ಲಾಘನೆ ಮಾಡುತ್ತ ತಮ್ಮ ದೈನಂದಿನ ದಿನದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿ ಆಚರಿಸಲಾಯಿತು.
ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೆಜರ್ ಎಂ.ಬಿ. ಗಣಪತಿ ಅವರು ಮಹಿಳೆಯರು ತಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿ ಕಾರ್ಯಕ್ಷೇತ್ರದಲ್ಲಿ ಅವರ ಪ್ರಗತಿಯನ್ನು ಉತ್ತುಂಗಕ್ಕ ಕೊಂಡೊಯ್ಯುವಂತೆ, ಹಾಗೂ ಮಹಿಳೆಯರ ಕಚೇರಿ ಹಾಗೂ ಗೃಹ ಕೃತ್ಯಗಳ ಬಗ್ಗೆ ಶ್ಲಾಘನೆ ಮಾಡಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಹಾಗೂ ಸಂಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಇದಕ್ಕೆ ಈಗಿರುವ ಪೂರಕ ವಾತಾವರಣ ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಿದರು. ನಂತರ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ಮಡಿಕೇರಿ: ಪೊವ್ವದಿ ಮಹಿಳಾ ಸಮಾಜ ವಿ. ಬಾಡಗ ಗ್ರಾಮ ಮತ್ತು ಅಖಿಲ ಕೊಡವ ಪೊಮ್ಮಕ್ಕಡ ಪರಿಷತ್ ಇವರ ಸಹಯೋಗದಲ್ಲಿ ವಿ. ಬಾಡಗ ಈಶ್ವರಿ ದವಸ ಭಂಡಾರದ ಕಟ್ಟಡದಲ್ಲಿ ಮಹಿಳಾ ದಿನಾಚರಣೆಯನ್ನು ಅಮ್ಮಣಿಚಂಡ ಪರ್ಲ್ ಮುತ್ತಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಂಡೇರಂಡ ಭವ್ಯ ಚಿಟ್ಟಿಯಪ್ಪ ಮತ್ತು ವೀರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಪಾಲ್ಗೊಂಡಿದ್ದರು. ಕೊಂಗಾಂಡ ಭವಾನಿ ಅಚ್ಚಯ್ಯ ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕೋಲತಂಡ ಸರಸು ಭೀಮಯ್ಯ ಪ್ರಾರ್ಥಿಸಿ, ಪೊವ್ವದಿ ಮಹಿಳಾ ಸಮಾಜದ ಕಾರ್ಯದರ್ಶಿ ಅಮ್ಮೇಕಂಡ ಜನಿತಾ ಸುಬ್ರಮಣಿ ಸ್ವಾಗತಿಸಿದರು.
ಅಖಿಲ ಕೊಡವ ಪೊಮ್ಮಕ್ಕಡ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪೊವ್ವದಿ ಮಹಿಳಾ ಸಮಾಜದ ಮತ್ತು ಅಖಿಲ ಕೊಡವ ಪೊಮ್ಮಕ್ಕಡ ಪರಿಷತ್‍ನ ಸಂಸ್ಥಾಪಕರಾದ ಮಳವಂಡ ಮೀನಾಕ್ಷಿ ಮಂದಪ್ಪ ಪ್ರಾಸ್ತಾವಿಕ ನುಡಿಯನ್ನಾಡಿದರು. ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗೆದ್ದವರಿಗೆ ಮಳವಂಡ ಮುತ್ತಮ್ಮ ಮುತ್ತಣ್ಣ ಬಹುಮಾನ ವಿತರಿಸಿದರು. ನಂಬುಡುಮಾಡ ಶೋಭ ಸುಬ್ರಮಣಿ ವಂದಿಸಿದರು.ಮಡಿಕೇರಿ: ಇಲ್ಲಿನ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಆಗಮಿಸಿ ಮಹಿಳಾ ದಿನದ ಪ್ರಾಮುಖ್ಯತೆಯನ್ನು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಂಶುಪಾಲೆ ಡಾ. ಜೆನಿಫರ್ ಲೋಲಿಟ ಮಹಿಳಾ ಸಬಲೀಕರಣದ ಅಗತ್ಯವನ್ನು ಹೇಳಿದರು. ಮಹಿಳಾ ಘಟಕದ ಸಂಚಾಲಕಿ ಡಾ. ಡಿ.ಕೆ. ಸರಸ್ವತಿ ಸ್ವಾಗತಿಸಿ, ದಿನದ ಮಹತ್ವವನ್ನು ಹೇಳಿದರು. ನಿರ್ಮಲ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು. ದೀರ್ಘಕೇಶಿ ಶಿವಣ್ಣ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿನಿಯರು ಮತ್ತು ಕಚೇರಿ ಸಿಬ್ಬಂದಿಗಳು ಹಾಜರಿದ್ದರು.