ಸಿದ್ದಾಪುರ, ಮಾ. 16: ನೆಲ್ಯಹುದಿಕೇರಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸತ್ಯನಾರಾಯಣ ದೇವರ ವಾರ್ಷಿಕೋತ್ಸವ ಹಾಗೂ ಪೂಜಾ ಕೈಂಕರ್ಯಗಳು ತಾ. 19ರಿಂದ 21ರವರೆಗೆ ನಡೆಯಲಿದೆ. ತಾ. 19ರಂದು ಸಂಜೆ 6.30ಕ್ಕೆ ತಕ್ಕರ ಮನೆಯಿಂದ ಭಂಡಾರ ಇಳಿಸುವದು, 7ಕ್ಕೆ ಪ್ರಾರಂಭ ಶುದ್ಧ ಕಳಸ, ದೇವರ ಬಲಿ ಬರುವದು ನಂತರ ಅನ್ನಸಂತರ್ಪಣೆ ನಡೆಯಲಿದೆ.
ತಾ. 20ರಂದು ಅಪರಾಹ್ನ 12.30ಕ್ಕೆ ಮಹಾಪೂಜೆ ಪಟ್ಟಣಿ, ಪೋದಮ್ಮ ದೇವಾಲಯದಲ್ಲಿ ಸಂಜೆ 5 ಗಂಟೆಗೆ ಅಕ್ಕಿಹೇರುವದು, ದೇವರ ಮೆರವಣಿಗೆ ನಂತರ ಮಹಾಪೂಜೆ ಮಂಗಳಾರತಿ. ತಾ. 21ರಂದು ಬೆಳಿಗ್ಗೆ 9.30ಕ್ಕೆ ಸಾಮೂಹಿಕ ಸತ್ಯ ನಾರಾಯಣ ಪೂಜೆ, 1.30ಕ್ಕೆ ಮಹಾಪೂಜೆ, 2ಕ್ಕೆ ಅನ್ನಸಂತರ್ಪಣೆ ಸಂಜೆ 4ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವದು.
5ಕ್ಕೆ ದೇವರ ಬಲಿ ಅವಭೃತ ಸ್ನಾನ, ರಾತ್ರಿ 7.30ಕ್ಕೆ ದೇವರ ಪ್ರದಕ್ಷಿಣೆ, ರಾತ್ರಿ ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ, ದೇವಾಲಯದಿಂದ ತಕ್ಕರ ಮನೆಗೆ ಭಂಡಾರ ತಲಪಿಸುವದು. ತಾ. 22ರಂದು ಬೆಳಿಗ್ಗೆ 10.30ಕ್ಕೆ ಶುದ್ಧ ಕಳಸ ಮಹಾಪೂಜೆ, ಮಧ್ಯಾಹ್ನ 1ಕ್ಕೆ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.