ಚಾಲಕ ಪರಾರಿ
ವೀರಾಜಪೇಟೆ, ಮಾ. 16: ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವೀರಾಜಪೇಟೆ ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ನಗರದ ಹೊರ ವಲಯದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಾಟಕ್ಕೆ ಅಣಿಯಾಗುತ್ತಿದ್ದ ಮಾಹಿತಿ ಮೇರೆಗೆ ನಗರ ಪೊಲೀಸರು ಸಿದ್ದಾಪುರ ರಸ್ತೆ ತೆಲುಗರ ಬೀದಿಯ ನೆಲ್ಲಮಕ್ಕಡ ಮೋಹನ್ ಅವರ ಮನೆಯ ಮುಂಭಾಗದಲ್ಲಿರುವ ತಿರುವೊಂದರಲ್ಲಿ ಲಾರಿ (ಕೆಎಲ್-51-ಎ-8426)ಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಮರಳು ಪತ್ತೆಯಾಗಿದೆ. ಲಾರಿಯು ನಗರದ ಚಿಕ್ಕಪೇಟೆ ನಿವಾಸಿ ಎಂ. ಮುತ್ತಣ ಎಂಬವರಿಗೆ ಸೇರಿದ್ದು, ಇವರ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ, ಹೆಚ್.ಸಿ ಸುಬ್ರಮಣ್ಯ, ಎಂ.ಯು ಸುನಿಲ್, ಗಿರೀಶ್, ಮತ್ತು ಅನಂದ ಮತ್ತು ಚಾಲಕ ಯೋಗೇಶ್ ಭಾಗವಹಿಸಿದ್ದರು. -ಕೆ.ಕೆ.ಎಸ್.