ಶಿರಂಗಾಲ, ಮಾ. 16 : ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಉತ್ತರ ಕೊಡಗಿನ ಗಡಿಭಾಗದ ಶಿರಂಗಾಲ ಗ್ರಾಮದ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ವಿ. ನಂಜುಂಡಪ್ಪ ಅವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕøತಿಕ ಪರಿಷತ್ತು ಹಾಗೂ ಸೃಷ್ಟಿ ಶಕ್ತಿ ಸಂಸ್ಥೆ ವತಿಯಿಂದ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ 2019ರ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ ಸಂಸ್ಥೆಯ ಅಧ್ಯಕ್ಷ ಇಸಾಕ್ ದೊಡ್ಡೇರಿ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್.ವಿ. ನಂಜುಂಡಪ್ಪ ಅವರನ್ನು ಸನ್ಮಾನಿಸಿದ ಶಾಸಕ ಎನ್.ರವಿ ಸುಬ್ರಮ್ಮಣ್ಯ ಅವರು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.
ಎಸ್.ವಿ.ನಂಜುಂಡಪ್ಪ ಅವರು ಶಿರಂಗಾಲ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಶ್ರಮಿಸಿರುವದು ಸೇರಿದಂತೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಈ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
1973 ರಲ್ಲಿ ಶಿರಂಗಾಲ ಗ್ರಾ.ಪಂ. ಅಧ್ಯಕ್ಷರಾಗಿದ್ದ ಸಂದರ್ಭ ಗ್ರಾ.ಪಂ.ಯಲ್ಲಿ ಕೈಗೊಂಡಿದ್ದ ಉತ್ತಮ ಸೇವಾ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಆ ವೇಳೆಗೆ ಸರ್ಕಾರದಿಂದ ಉತ್ತಮ ಗ್ರಾ.ಪಂ. ಅಧ್ಯಕ್ಷ ಪ್ರಶಸ್ತಿ ಗಳಿಸಿರುವದನ್ನು ಇಲ್ಲಿ ಸ್ಮರಿಸÀಬಹುದು.