*ಗೋಣಿಕೊಪ್ಪಲು, ಮಾ. 12: ಅರುವತ್ತೊಕ್ಲು ಮೈಸೂರಮ್ಮ ನಗರದ ಶ್ರೀ ಆಶಿರ್ವಾದ್ ಮುತ್ತಪ್ಪ ದೇವರ ಎಂಟನೇ ವಾರ್ಷಿಕೋತ್ಸವದ ಎರಡು ದಿನಗಳು ಅದ್ಧೂರಿಯಿಂದ ನಡೆಯಿತು. ಸ್ಥಳೀಯ ನಿವಾಸಿಗಳು ದೇವರ ಆಶೀರ್ವಾದ ಪಡೆದು ಪುನೀತರಾದರು. ಭಕ್ತಾದಿಗಳು ದೇವರಿಗೆ ಹರಕೆ, ಪೂಜೆ ಸಲ್ಲಿಸುವ ಮೂಲಕ ದೇವರ ಸೇವೆಗೆ ಮುಂದಾದರು. ಎರಡು ದಿನಗಳು ನಡೆದ ಮುತ್ತಪ್ಪ ದೇವರ ಉತ್ಸವದಲ್ಲಿ ಮುತ್ತಪ್ಪ ಬಸರುಮಲೆ, ಗುಳಿಗ ಸೇರಿದಂತೆ ವಿವಿಧ ತೆರೆಗಳು ನಡೆದವು. ಎರಡು ದಿನಗಳು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.