ಮಡಿಕೇರಿ, ಮಾ. 12: ಗೋಣಿಕೊಪ್ಪ, ಅರ್ವತೊಕ್ಲು ಗ್ರಾಮದ ಕಾಡ್ಲಯ್ಯಪ್ಪ ದೇವರ ಉತ್ಸವ ತಾ. 16 ಹಾಗೂ 17 ರಂದು ನಡೆಯಲಿದೆ. ತಾ. 16 ರಂದು ಸಂಜೆ 5.30 ಗಂಟೆಗೆ ಕಾಡ್ಯಮಾಡ ಐನ್‍ಮನೆಯಿಂದ ದೇವರ ಭಂಡಾರ ಇಳಿಯುವದು, 6.30 ಗಂಟೆಗೆ ಕಟ್ಟು ತೆಗೆಯುವದು, ತಾ. 17 ರಂದು ಬೆಳಿಗ್ಗೆ 7.45 ಗಂಟೆಗೆ ಕೊಂಡ ಹಾಯುವದು, ಮಹಾಪೂಜೆ, ಸಂಜೆ 6.30 ಗಂಟೆಯ ನಂತರ ಅಜ್ಜಪ್ಪನಿಗೆ ಕೊಡುವ ಕಾರ್ಯ ಜರುಗಲಿದೆ.