ಕುಶಾಲನಗರ, ಮಾ. 12: ಕುಶಾಲನಗರ ಪಟ್ಟಣದ ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ ಪೂಜಾ ಕಾರ್ಯಕ್ರಮ ನಡೆಯಿತು.
ಗಣಹೋಮ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು, ಕಳಸ ಪೂಜೆ, ಅಭಿಷೇಕಗಳನ್ನು ನೆರವೇರಿಸಲಾಯಿತು. ಕೇರಳದ ಕಾಳೇಘಾಟ್ ಇಲ್ಲಂ ಸಂದೀಪ್ ನಂಬೂದಿರಿ ನೇತೃತ್ವದಲ್ಲಿ ಪೂಜಾ ವಿಧಿಗಳು ಜರುಗಿದವು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದರು. ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ವರದ, ಪ್ರಧಾನ ಕಾರ್ಯದರ್ಶಿ ಕೆ.ಕೆ.ದಿನೇಶ್, ಉಪಾಧ್ಯಕ್ಷರುಗಳಾದ ಹರೀಂದ್ರನ್, ಬೋಬಿ, ಕಾರ್ಯದರ್ಶಿ ರಂಜಿತ್, ಪ್ರಮುಖರಾದ ನರೇಂದ್ರ, ಅನೀಶ್, ಸುಧೀರ್, ಪವನ್, ಚಂದ್ರನ್, ರಾಜೇಶ್, ಪ್ರಕಾಶ್ ಮಾಜಿ ಸೈನಿಕರಾದ ವಿನು, ಸುಧೀರ್, ಉದ್ಯಮಿಗಳಾದ ಸಹದೇವ ನಂಬಿಯಾರ್, ರಾಮದಾಸ್, ಲಕ್ಷ್ಮಣ, ಭಾಸ್ಕರನ್ ಮತ್ತಿತರರು ಇದ್ದರು.