ಸೋಮವಾರಪೇಟೆ, ಮಾ. 12: ಸಮೀಪದ ಸಿದ್ಧಲಿಂಗಪುರ-ಅರಸಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‍ನಾಥ್ ಗುರೂಜಿ ಅವರ ನೇತೃತ್ವದಲ್ಲಿ ಅರ್ಚಕರುಗಳಾದ ಜಗದೀಶ್ ಉಡುಪ, ಪ್ರಸಾದ್, ಮೋಹನ್, ವಾದಿರಾಜ್, ಕಿರಣ್‍ಕುಮಾರ್ ಅವರುಗಳ ಪೌರೋಹಿತ್ಯದಲ್ಲಿ ಪಂಚಮಿ ಪೂಜೆಯ ವಿಧಿವಿಧಾನಗಳು ನೆರವೇರಿದವು.

ಕ್ಷೇತ್ರದಲ್ಲಿರುವ ಶ್ರೀಮಂಜುನಾಥ, ಅನ್ನಪೂರ್ಣೇಶ್ವರಿ, ಕಾಲಭೈರವ ದೇವರುಗಳಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಗಣಪತಿ ಹೋಮ, ಮಹಾಮಂಗಳಾರತಿ, ನವ ನಾಗ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ ಪೂಜೆ, ಸಂಕಲ್ಪ ಪೂಜೆಗಳು ನಡೆದವು. ದೇವಾಲಯ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಆಡಳಿತ ಮಂಡಳಿ ಪದಾಧಿಕಾರಿ ನಾಪಂಡ ಮುದ್ದಪ್ಪ ಸೇರಿದಂತೆ ಭಕ್ತಾದಿಗಳು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ನಂತರ ಭಕ್ತಾದಿಗಳಿಗೆ ಅನ್ನದಾನ ನಡೆಯಿತು.