ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಬೊಟ್ಟೋಳಂಡ ಎನ್. ಪೆಮ್ಮಯ್ಯ ಅವರ 10 ಎಕರೆ, ತೆಕ್ಕ ಬೊಟ್ಟೋಳಂಡ ರಾಜೇಂದ್ರ ಅವರ 4 ಎಕರೆ, ಬಿ.ಕೆ. ಮಾದಪ್ಪ ಅವರ 25 ಎಕರೆ, ಬಿ.ಎನ್.ಗಣಪತಿ ಅವರ 5 ಎಕರೆ, ಕಲಿಯಂಡ ನಿತಿನ್ ಪೆÇನ್ನಣ್ಣ ಅವರ 10 ಎಕರೆ, ಟಿ.ಸಿ. ಮಾದಪ್ಪ ಅವರ 4 ಎಕರೆ, ಟಿ.ಬಿ.ಕಾಳಪ್ಪ ಅವರ 1 ಎಕರೆ, ಎಡಿಕೇರಿ ದಿ|| ನಾಣಯ್ಯ ಅವರ 2 ಎಕರೆ ಹಾಗೂ ತೆಕ್ಕಬೊಟ್ಟೋಳಂಡ ಕುಟುಂಬದ ಸುಮಾರು 60 ಎಕರೆ ಜಾಗ ಅಲ್ಲದೆ ಸರಕಾರದ ಸುಮಾರು 300 ಎಕರೆ ಅರಣ್ಯಕ್ಕೆ ತಾ. 6ರ ಸಂಜೆ 5 ಗಂಟೆಗೆ ಬೇಟೆಗಾಗಿ ಬಿ. ಪೂವಣ್ಣ, ಎಂ.ಪಿ. ಕುಟ್ಟಪ್ಪ, ಎಂ. ವೀರ ಮೇದಪ್ಪ, ಟಿ. ಸಂತೋಷ್ ಕರುಂಬಯ್ಯ ಅವರು ತೆರಳಿದ ಸಂದರ್ಭ ಬೆಂಕಿ ಹಾಕಿರುವದನ್ನು ತೆಕ್ಕಬೊಟ್ಟೋಳಂಡ ಪಿ.ಮಾದಪ್ಪ ಮತ್ತು ಬೊಟ್ಟೋಳಂಡ ಮಾದಪ್ಪ ಅವರು ನೋಡಿದ್ದಾರೆ. ಈ ಸಂದರ್ಭದಲ್ಲಿ ಕೋವಿಯಿಂದ ಇವರಿಗೆ ಬೆದರಿಕೆ ಒಡ್ಡಿರುತ್ತಾರೆ. ಸುಮಾರು 400 ಎಕರೆಯಷ್ಟು ಜಾಗವು ಬೆಂಕಿಯಿಂದ ಸುಟ್ಟು ಹೋಗಿದ್ದು, 3 ರಿಂದ 4 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿರುವದಾಗಿ ಬೊಟ್ಟೋಳಂಡ ಎನ್. ಪೆಮ್ಮಯ್ಯ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.ತೋಟ-ಅರಣ್ಯಕ್ಕೆ ಬೆಂಕಿ : ಪ್ರಕರಣ ದಾಖಲು