ಶನಿವಾರಸಂತೆ, ಮಾ.12: ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿ ನಿವಾಸಿ ವಾಹೀದ್ ಪಾಷ (50) ಎಂಬವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಕೊಣನೂರಿನಲ್ಲಿರುವ ಮಗಳು ತಾಸೀನ ಭಾನು ಅವರ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮಗಳ ಮನೆಗೂ ಹೋಗದೆ, ತ್ಯಾಗರಾಜ ಕಾಲೋನಿಯ ತಮ್ಮ ಮನೆಗೂ ಬಾರದೆ ಇರುವದರಿಂದ ತಂದೆಯನ್ನು ಪತ್ತೆ ಹಚ್ಚಿಕೊಡುವಂತೆ ಮಗ ಮುಬಾರಖ್ ಪಾಷ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.