ವೀರಾಜಪೇಟೆ, ಮಾ. 13: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಶ್ರೀ ಬೊಳ್ಳಿಬಿಲ್ಲಯ್ಯಪ್ಪ ದೇವರ ಉತ್ಸವವು ತಾ. 14 ರಿಂದ ತಾ. 16 ರವರೆಗೆ ನಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನ ಸಮಿತಿ ಅಧ್ಯಕ್ಷ ಮುಂಡಚಾಡಿರ ನಂದಾ ಅವರು, ತಾ. 14 ರಂದು ಪಟ್ಟಣಿ, ಅಂದಿ ಬೊಳಕು, ತೂಚಂಬಲಿ, ಕ್ಷೇತ್ರಫಲಪೂಜೆ ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. ತಾ 15 ರಂದು ಪ್ರಾತಃಕಾಲ 5 ಗಂಟೆಗೆ ಇರುಬೆಳಕು, ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಅಪರಾಹ್ನ 2.30ರಿಂದ ಎತ್ತುಪೋರಾಟ, ಬೊಳಕಾಟು, ದೇವರ ಮೆರವಣಿಗೆ ನಂತರ 3.30ಕ್ಕೆ ಭಟ್ಟಮಕ್ಕಿಯಲ್ಲಿರುವ ದೇವರ ಬನಕ್ಕೆ ಹೋಗಿ ಪೂಜೆ ನಂತರ ದೇವಸ್ಥಾನದಲ್ಲಿ ದೇವರ ನೃತ್ಯ ಮತ್ತು ಸುಬ್ರಮಣ್ಯ ದೇವರ ಗುಡಿಯಲ್ಲಿ ಪೂಜೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. ತಾ. 16 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ 3 ಗಂಟೆಗೆ ಬೊಳಕಾಟು 4 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು ನಂತರ 4.30ಕ್ಕೆ ಕಾವೇರಿ ನದಿಯಲ್ಲಿ ದೇವರ ಅವಭೃತ ಸ್ನಾನ, ರಾತ್ರಿ 10ರ ವರೆಗೆ ದೇವಸ್ಥಾನದಲ್ಲಿ ದೇವರ ನೃತ್ಯ ನಡೆಯಲಿದೆ ನಂತರ ಮಹಾಪೂಜೆಯೊಂದಿಗೆ ಶ್ರೀ ಬೊಳ್ಳಿಬಿಲ್ಲಯ್ಯಪ್ಪ ದೇವರ ಉತ್ಸವವು ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

ವಿಶೇಷ ಪೂಜೆ ಮಾಡಿಸುವವರು 2ದಿನಗಳ ಮುಂಚೆ ಆಡಳಿತ ಮಂಡಳಿಗೆ ತಿಳಿಸಬೇಕು ಮತ್ತು ಧನ ಸಹಾಯ ಮಾಡಲಿಚ್ಚಿಸುವವರು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ವೀರಾಜಪೇಟೆ ಶಾಖೆ ಖಾತೆ ಸಂಖ್ಯೆ 621006142643ಗೆ ಸಂದಾಯ ಮಾಡಬಹುದು ಎಂದರು. ಹೆಚ್ಚಿನ ಮಾಹಿತಿಗಾಗಿ (ಮೊ. 9880044290) ಸಂಪರ್ಕಿಸಬಹುದು.