ನಾಪೋಕ್ಲು, ಮಾ. 13: ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಬಡಕೇರಿಯ ಭಗವತಿ ಸ್ವಸಹಾಯ ಸಂಘದ ಸದಸ್ಯರು ರಸ್ತೆ ಬದಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾ ಅಭಿಯಾನ ಕೈಗೊಂಡರು. ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಎಸೆಯಲಾಗಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಶ್ರೀಲಕ್ಷ್ಮಿ zsರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು, ಕಬಡಕೇರಿ ಭಗವತಿ ಸ್ವಸಹಾಯ ಸಂಘದ ಸದಸ್ಯರು, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಮಂಡೇಪಂಡ ತ್ಯಾಗಿ ಅಪ್ಪಯ್ಯ, ಮಂಡೇಡ ಲಲಿತಾ, ಸುಶೀಲಾ ರಾಜೀವ್, ಪುಷ್ಪ, ಅಪ್ಪಯ್ಯ, ಹೊದ್ದೂರು ಗ್ರಾಮದ ನಿವೃತ್ತ ಶಿಕ್ಷಕ ಚೌರೀರ ಉದಯ. ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.