ವೀರಾಜಪೇಟೆ, ಮಾ. 11: ಸಾರ್ವಜನಿಕ ಸೇವೆಯಲ್ಲಿ ಹಲವು ವರ್ಷಗಳಿಂದ ನಾಗರಿಕರಿಗೆ ತನ್ನ ಸೇವೆಯನ್ನು ಮುಡಿಪ್ಪಾಗಿಟ್ಟಿರುವ ಡೋನೆಟರ್ಸ್ ಚಾರಿಟಿಬಲ್ ಟ್ರಸ್ಟ್ ತುರ್ತು ಚಿಕಿತ್ಸಾ ವಾಹನವನ್ನು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಪಂಜರ್‍ಪೇಟೆಯಲ್ಲಿ ಡೋನೆಟರ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಾಫಿ ಜುಮ್ಮ ಮಸೀದಿಯ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜುಮ್ಮ ಮಸೀದಿಯ ಖತೀಬ್ ಕಲೀಲ್ ಫೈಜಿ ಇರ್ಫಾನಿ ಅವರು ತುರ್ತು ಚಿಕಿತ್ಸಾ ವಾಹನವನ್ನು ಲೋಕಾರ್ಪಣೆ ಮಾಡಿದರು. ನಾಗರಿಕ ಸೇವೆಯು ದೇವರ ನಾಮದಿಂದ ಸಾದರಗೊಂಡಿದೆ. ಜಾತಿ, ಮತ, ಭೇದವಿಲ್ಲದೆ ನಿರ್ಗತಿಕ ಜನರನ್ನು ಶುಶ್ರ್ರೂಷೆ ಮಾಡುವದು ದೇವರಿಗೆ ಪ್ರೀತಿ ಪಾತ್ರವಾದಂತೆ; ಸಂಸ್ಥೆಯು ಅರಂಭಿಸಿರುವ ಆ್ಯಂಬುಲೆನ್ಸ್ ಸೇವೆಗೆ ಶುಭ ಹಾರೈಸಿದರು.
ಸಂಸ್ಥೆಯ ಗೌರವ ಆದ್ಯಕ್ಷ ಮೊಹಮ್ಮದ್ ರಾಫಿ ಮಾತನಾಡಿ ಸಂಸ್ಥೆಯು ಅರಂಭಗೊಂಡು 6 ವರ್ಷಗಳು ಸಂದಿದ್ದು, ನಾಗರಿಕ ಸೇವೆಯಲ್ಲಿ ತನ್ನ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿಕೊಂಡು ಬಂದಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಳೆದ ಆರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಸೇವೆಗೆ ಕಂಕಣ ಬದ್ಧವಾಗಿ ನಿಸ್ವಾರ್ಥ ಸೇವೆ ಸಲ್ಲಿಸಲಾಗುತ್ತಿದೆ. ತುರ್ತು ಚಿಕಿತ್ಸಾ ವಾಹನದ ಸೇವೆಯನ್ನು ಸಾರ್ವಜನಿಕ ಬಳಕೆಗೆ ವಿದ್ಯುಕ್ತವಾಗಿ ಅರಂಭಿಸಲಾಗಿದೆ. ಸೇವೆಯು ದಿನದ 24 ಗಂಟೆ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ 9606184955 ದೂರವಾಣಿ ಸಂಪರ್ಕ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷ ಸಮೀರ್ ಎನ್.ಕೆ., ಉಪಾಧ್ಯಕ್ಷ ನಿಸಾರ್ ಅಹಮ್ಮದ್, ಕಾರ್ಯದರ್ಶಿ ಯೂನಸ್ ರುಮಾನ್ ಮತ್ತು ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.
- ಕೆ.ಕೆ.ಎಸ್.