ನಾಪೋಕ್ಲು, ಮಾ.11: ಇಲ್ಲಿನ ಕೊಡವ ಸಮಾಜದ 2019-22ರ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಜನರ ಆಡಳಿತ ಮಂಡಳಿ ಚುನಾವಣೆಗೆ 52 ಮಂದಿ ನಾಮ ಪತ್ರ ಸಲ್ಲಿಸಿದ್ದರು.

ಅಧ್ಯಕ್ಷರಾಗಿ ಮನುಮುತ್ತಪ್ಪ, ಉಪಾಧ್ಯಕ್ಷರಾಗಿ ಮಾಳೆಯಂಡ ಎ. ಅಯ್ಯಪ್ಪ, ಗೌರವ ಕಾರ್ಯದರ್ಶಿಯಾಗಿ ಕುಲ್ಲೇಟಿರ ಅಜಿತ್‍ನಾಣಯ್ಯ, ಜಂಟಿ ಕಾರ್ಯದರ್ಶಿಯಾಗಿ ಮಾಚೆಟ್ಟಿರ ಕುಶಾಲಪ್ಪ ಹಾಗೂ ಖಜಾಂಚಿಯಾಗಿ ಅಪ್ಪಾರಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶಿವಚಾಳಿಯಂಡ ಎಂ. ಅಯ್ಯಪ್ಪ, ಅರೆಯಡ ಡಬ್ಲ್ಯು ರಘು ಕರುಂಬಯ್ಯ, ಕಾಟುಮಣಿಯಂಡ ಎಂ. ಉಮೇಶ್, ಕುಂಡ್ಯೋಳಂಡ ವಿಶುಪೂವಯ್ಯ, ಕೊಂಡೀರ ಕೆ. ನಾಣಯ್ಯ, ಮುಕ್ಕಾಟಿರ ಎಂ.ವಿನಯ್, ಚೀಯಕಪೂವಂಡ ಸಚಿನ್ ಪೂವಣ್ಣ, ಬೊಳ್ಳಚೆಟ್ಟೀರ ಎಂ. ಸುರೇಶ್, ಚೇನಂಡ ಗಿರೀಶ್‍ಪೂಣಚ್ಚ, ಉದಿಯಂಡ ಎ. ಸುರನ್ ನಾಣಯ್ಯ, ಹಾಗೂ ಕುಯ್ಯಂಗೇರಿ ಕ್ಷೇತ್ರದಿಂದ ಬೊಳಿಯಂಡ ಹರೀಶ್ ಕಾರ್ಯಪ್ಪ, ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿಯಾಗಿ ಚೋಕಿರ ಪೂವಯ್ಯ ಕಾರ್ಯನಿರ್ವಹಿಸಿ ಆಯ್ಕೆಯಾದ ಸದಸ್ಯರುಗಳಿಗೆ ಶುಭ ಕೋರಿದರು.

- ದುಗ್ಗಳ