ಮಡಿಕೇರಿ, ಮಾ. 11: ಕುಂಜಿಲಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಿಯ ವಾರ್ಷಿಕ ಉತ್ಸವವು ತಾ. 14 ರಂದು ಜರುಗಲಿದೆ. ಅಂದು ಬೆಳಗ್ಗಿನ ಜಾವ ಕುಡುವಂಡ ಕುಟುಂಬದಿಂದ ಭಂಡಾರ ತೆರಳುವದರೊಂದಿಗೆ, ಉತ್ಸವಕ್ಕೆ ಚಾಲನೆ ದೊರೆಯಲಿದೆ. ಮಧ್ಯಾಹ್ನ 1 ಗಂಟೆಗೆ ಎತ್ತು ಪೋರಾಟ, ದೇವಿಯ ಬನದಲ್ಲಿ ದೈವಿಕ ಕೈಂಕರ್ಯದೊಂದಿಗೆ ಹರಕೆ ಸಲ್ಲಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.