ಗೋಣಿಕೊಪ್ಪ ವರದಿ, ಮಾ. 11 : ತಿತಿಮತಿ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. 15 ರಿಂದ 3 ದಿನಗಳ ಕಾಲ ನಡೆಯಲಿದೆ.

ತಾ. 15 ರಂದು ಬೆಳಗ್ಗೆ 11 ಗಂಟೆಗೆ ಗಣಪತಿ ಹೋಮ, ಮತ್ತು ಮಕ್ಕಳ ದಿವ್ಯ ಭವಿಷ್ಯಕ್ಕಾಗಿ ಮೌನ ಜ್ಞಾನ ಕಾರ್ಯಕ್ರಮ ನಡೆಯಲಿದೆ. ಅಂದು ಸಾಯಂಕಾಲ 4 ಕ್ಕೆ ಬಾಳುಮನಿ ಗಣಪತಿ ದೇವಸ್ಥಾನದಿಂದ ಕಳಸ ತರಲಾಗುತ್ತದೆ. 16 ಹಾಗೂ 17 ರಂದು ವಸುರಿಮಾಲ ತೆರೆ, ಗುಳಿಗ ತೆರೆ ಹಾಗೂ ಕಾರ್ನವರ್ ತೆರೆ ಹೀಗೆ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.