ಮಡಿಕೇರಿ, ಮಾ. 11 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರು ವರ್ಷಗಳಿಂದ ಆಚರಿಸುತ್ತಿರುವ ಕೊಡಗಿನ ಕಥೆಗಾರ್ತಿ ದಿವಂಗತ ಗೌರಮ್ಮ ಅವರ ಜನ್ಮ ದಿನಾಚರಣೆಯನ್ನು ತಾ. 13ರಂದು ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದು, ಮೈಸೂರಿನ ಹಿರಿಯ ಸಾಹಿತಿ ಹಾಗೂ ವಿಶ್ವಮಾನವ ಕುವೆಂಪು ಅವರ ಪುತ್ರಿ ತಾರಣಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಈ ಸಾಲಿನಲ್ಲಿ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿಪ್ರಕಾಶ್ ಅವರು ಭಾಜನರಾಗಿದ್ದು, ಇದೇ ಸಂದರ್ಭ ಅವರಿಗೆ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವದು. ಇದರೊಂದಿಗೆ ಗೌರಮ್ಮ ಕುಟುಂಬಸ್ಥರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ವಿಜೇತರಾಗಿರುವ ಮಡಿಕೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಮತ (ಪ್ರಥಮ), ಮಂಜುಳಾ (ದ್ವಿತೀಯ), ಸೋಮವಾರಪೇಟೆಯ ಹಟ್ಟಿಹೊಳೆ ನಿರ್ಮಲ ವಿದ್ಯಾಭವನ ಪ್ರೌಢಶಾಲೆಯ ಶ್ರೀಶಾಂತ್ (ತೃತೀಯ) ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವದು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮೈಸೂರಿನ ಸಾಹಿತಿ ಚಿದಾನಂದ ಗೌಡ್ರು ಆಗಮಿಸಲಿದ್ದು, ಕೊಡಗು ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ, ಸಾಹಿಗಳಾದ ಪ್ರೋ.ಪಿ.ಎ.ಸುಶೀಲ ಮುಖ್ಯ ಅತಿಥಿಗಳಾಗಿ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕೋಶಾಧ್ಯಕ್ಷರಾದ ಡಾ. ಕೆ. ದಯಾನಂದ, ಬಾಳೆಯಡ ಕಿಶನ್‍ಪೂವಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ತಿಳಿಸಿದ್ದಾರೆ.