ಸ್ವಾವಲಂಬಿ ಬದುಕಿಗೆ ಪರಿಶ್ರಮ ಅಗತ್ಯ: ಛಾಯಾ ನಂಜಪ್ಪ

ಗೋಣಿಕೊಪ್ಪ ವರದಿ, ಮಾ. 10: ದೊಡ್ಡ ಮಟ್ಟದ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಅಗತ್ಯ ಎಂದು ನೆಕ್ಟರ್ ಫ್ರೆಸ್ ಕಂಪೆನಿ ಸಂಸ್ಥಾಪಕಿ ಛಾಯಾ ನಂಜಪ್ಪ ಅಭಿಪ್ರಾಯಪಟ್ಟರು.

ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಮಹಿಳಾ ಕ್ಷೇಮಾಭಿವೃಧ್ಧಿ ಘಟಕ, ಗೋಣಿಕೊಪ್ಪ ರೋಟರಿ ಸಂಸ್ಥೆ ಹಾಗೂ ರೆಡ್‍ರಿಬ್ಬನ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಯಶಸ್ವಿ ಮಹಿಳಾ ಸಾಧಕಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸ್ವಾವಲಂಭಿ ಬದುಕು ಸಾಗಿಸಲು ಕಠಿಣ ಪರಿಶ್ರಮ ಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರತೀ ಮಹಿಳೆ ತಾನು ಬೆಳೆಯಬೇಕು ಎಂಬ ಛಲದೊಂದಿಗೆ ಮುನ್ನಡೆಯಬೇಕು ಎಂದರು.

ಈ ಸಂದರ್ಭ ಕೊಡವ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಚಿರಿಯಪಂಡ ರಾಕೇಶ್ ಪೂವಯ್ಯ, ಖಜಾಂಜಿ ಕೆ. ಎನ್. ಉತ್ತಪ್ಪ, ಪ್ರಾಂಶುಪಾಲ ಡಾ. ಪಿ. ಸಿ. ಕವಿತಾ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಯೋಜನಾಧಿ ಕಾರಿ ಎನ್. ಎಸ್. ಸುಜಿತ್, ಮಹಿಳಾ ಕ್ಷೇಮಾಭಿವೃಧ್ಧಿ ಘಟಕ ಅಧ್ಯಕ್ಷೆ ಪಿ.ಜೆ. ಅನುರಾಧ, ಗೋಣಿಕೊಪ್ಪ ರೋಟರಿ ಅಧ್ಯಕ್ಷ ದಿಲನ್ ಚೆಂಗಪ್ಪ ಉಪಸ್ಥಿತರಿದ್ದರು.

ಶಿಯಾನಾ ಬೆಳ್ಯಪ್ಪ ನಿರೂಪಿಸಿ ದರು. ಸಿವಿಕ ಸೀತಮ್ಮ ಪ್ರಾರ್ಥನೆ, ವಚನ ಮೊಣ್ಣಪ್ಪ ಪ್ರಾರ್ಥಿಸಿದರು. ಲಾಸ್ಯ ವಂದಿಸಿದರು.

ವೈವಿದ್ಯಮಯ ಮಹಿಳಾ ದಿನಾಚರಣೆ

ಗೋಣಿಕೊಪ್ಪ ವರದಿ: ಇಲ್ಲಿನ ಕಾವೇರಿ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಹಲವು ಸಾಂಸ್ಕøತಿಕ, ಕ್ರೀಡಾ ಪೈಪೋಟಿ, ಸನ್ಮಾನ ಕಾರ್ಯಕ್ರಮ ನಡೆಯಿತು.

ಇಬ್ಬರು ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಶಿಕ್ಷಣ ಕ್ಷೇತ್ರದಲ್ಲಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರುಗಳನ್ನು ಸನ್ಮಾನಿಸಲಾಯಿತು.

ಬಾಂಬ್ ಇನ್ ದ ಸಿಟಿ ಸ್ಪರ್ಧೆ ಯಲ್ಲಿ ವಿ. ಶಾಂಭವಿ, ಕೊಣಿಯಂಡ ಬೋಜಮ್ಮ ಉತ್ತಪ್ಪ, ಬಾಟಲಿಗೆ ಚೆಂಡು ಹಾಕುವ ಸ್ಪರ್ಧೆಯಲ್ಲಿ ವಿ. ಶಾಂಭವಿ, ನಯನ ರಮೇಶ್, ಪಿಕ್ ಅಯಿಂಡ್ ಆಕ್ಟ್‍ನಲ್ಲಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ರೀನಾ ರಾಜಿವ್, ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡರು. ಲಕ್ಕಿ ವುಮೆನ್ ವಿಭಾಗದಲ್ಲಿ ಕಾಡ್ಯಮಾಡ ನೀಲ ದೇವಯ್ಯ ಬಹುಮಾನ ಪಡೆದುಕೊಂಡರು.

ಈ ಸಂದರ್ಭ ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೆರ ಉತ್ತರೆ ಅಪ್ಪಚ್ಚು, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಚೆಂಬಾಂಡ ಮೀನಾ, ಕಾವ್ಯ ಮದು ಉಪಸ್ಥಿತರಿದ್ದರು.

ಕಾವೇರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ : ಮನೆಯಲ್ಲಿ ಮಂಗಳಕರ ನುಡಿಗಳನ್ನಾಡುವ ಅಭ್ಯಾಸವನ್ನು ಮಹಿಳೆಯರು ರೂಢಿಸಿ ಕೊಳ್ಳುವ ಮೂಲಕ ಕುಟುಂಬವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ ನಿಭಾಯಿಸಲು ಸಹಕಾರಿ ಯಾಗುತ್ತದೆ ಎಂದು ಬೆಂಗಳೂರಿನ ಅಫೆಕ್ಸ್ ಬ್ಯಾಂಕ್‍ನ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಮಾಧುರಿ ಚಂಗಪ್ಪ ಹೇಳಿದರು.

ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುವ ಮಹತ್ತರ ಜವಾಬ್ದಾರಿ ಇಂದು ಮಹಿಳೆಯರ ಮೇಲಿದೆ, ಮನೆಯಲ್ಲಿ ಮಂಗಳಕರ ನುಡಿಗಳನ್ನಾಡುವ ಅಭ್ಯಾಸವನ್ನು ಮಹಿಳೆಯರು ರೂಢಿಸಿ ಕೊಂಡಾಗ ಕುಟುಂಬ ಉತ್ತಮ ದಾರಿಯಲ್ಲಿ ಸಾಗುವಂತಾಗುತ್ತದೆ ಎಂದರು.

ಪ್ರಾಂಶುಪಾ¯ ಪ್ರೊ.ಎಸ್.ಆರ್. ಉಷಾಲತ ಮಾತನಾಡಿ, ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಶಿಕ್ಷಣವೊಂದೇ ಮಹಿಳಾ ಅಸಮಾನತೆ ಯನ್ನು ತೊಡೆದುಹಾಕಲು ಇರುವ ಮಾರ್ಗ. ಯಾವದೇ ಹೆಣ್ಣು ಒಂದು ಕುಟುಂಬದ ಸಾಮರಸ್ಯವನ್ನು ಕದಡದೆ ಮನಸುಗಳನ್ನು ಬೆಸೆಯುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭ ಕಾವೇರಿ ಕಾಲೇಜಿನಲ್ಲಿ ಸುಧೀರ್ಘ 25 ವರ್ಷಗಳನ್ನು ಪೂರೈಸಿ ಸೇವೆಸಲ್ಲಿಸುತ್ತಿ ರುವ ಪ್ರಾಧ್ಯಾಪಕರುಗಳಾದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರೇಖಾ ವಸಂತ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ಡಿ. ನಾಗಲಕ್ಷ್ಮಿ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಉಪ ಪ್ರಾಂಶುಪಾಲೆ ಪ್ರೊ. ಕೆ.ಎಸ್. ತುಳಸಿ, ಕಾವೇರಿ ಕಾಲೇಜು ಮಹಿಳಾ ಸಂಘಟನೆಯ ಸಂಚಾಲಕಿ ಡಾ. ಎ.ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಪ್ರೊ. ಎಂ.ಎಸ್. ಭಾರತಿ, ಕಛೇರಿ ಅಧೀಕ್ಷಕಿ ಹೆಚ್.ಕೆ. ಸೀತಾಲಕ್ಷ್ಮಿ ಉಪಸ್ಥಿತರಿದ್ದರು.

ಮಡಿಕೇರಿ: ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕವಾದ ‘ಮಾನಿನಿ’ ವತಿಯಿಂದ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಕೊಡಗು ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆಯಾಗಿರುವ ಕಸ್ತೂರಿ ಗೋವಿಂದಮಯ್ಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ‘ಪುರಾಣ ಕಾಲದಿಂದ ಇಲ್ಲಿಯವರೆಗಿನ ಸ್ರೀಯ ಸ್ಥಾನಮಾನ ಗಳನ್ನು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಸ್ಥಾನಮಾನ ಹೇಗಿದೆ, ಸಮಾಜದಲ್ಲಿ ಸ್ತ್ರೀ ಹೇಗೆ ನಡೆದುಕೊಳ್ಳ ಬೇಕು’ ಎಂಬವದನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಚಿತ್ರಾ ವೈ. ವಹಿಸಿದ್ದರು. ಮಹಿಳಾ ಘಟಕದ ಸಂಚಾಲಕಿಯಾದ ಮುತ್ತಮ್ಮ ಕೆ.ಕೆ, ಸಹಾಯಕ ಪ್ರಾಧ್ಯಾಪಕರು, ಸ್ವಾಗತಿಸಿ, ಚಂದ್ರಕಲಾ ಎಂ.ಎಸ್ ಸಹಾಯಕ ಪ್ರಾಧ್ಯಾಪಕರು, ವಂದಿಸಿದರು. ಕುಸುಮಾ ಕೆ.ಪಿ ಸಹಾಯಕ ಪ್ರಾಧ್ಯಾಪಕರು ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಕೂಡಿಗೆ: ಕೂಡುಮಂಗಳೂರು ಮಹಿಳಾ ಮೋರ್ಚಾ ಶಕ್ತಿ ಕೇಂದ್ರದ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸ ಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಕ್ತಿ ಕೇಂದ್ರ ಅಧ್ಯಕ್ಷೆ ಸಾವಿತ್ರಿ ರಾಜ ನೆರವೇರಿಸಿ, ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಕನಕ, ಕೇಂದ್ರದ ಪಧಾದಿಕಾರಿಗಳಾದ ನಿರ್ಮಲ, ಸುಶೀಲಾ ಮೂಡ್ಲಿಗೌಡ, ಗೌರಮ್ಮ ಸವಿತಾ ಅಪ್ಪಣ, ಗೀತಾ, ಮಣಿ, ಮೊದಲಾದವರು ಭಾಗವಹಿಸಿದರು.ಮಡಿಕೇರಿ : ತಮ್ಮ ಮೇಲಾಗುತ್ತಿ ರುವ ದೌರ್ಜನ್ಯವನ್ನು ಪ್ರಶ್ನೆ ಮಾಡುವ ಮನೋಭಾವ ಮತ್ತು ಧೈರ್ಯವನ್ನು ಬೆಳೆಸಿ ಕೊಂಡಾಗ ಮಾತ್ರ ಮಹಿಳೆಯರು ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಸಾಧ್ಯವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ನಗರದ ಕೂರ್ಗ್ ಕಮ್ಯುನಿಟಿ ಸಭಾಂಗಣದಲ್ಲಿ ‘ಆಗದಿರಲಿ ಸಂತ್ರಸ್ತರು, ಹರಿಯ ದಿರಲಿ ಕಣ್ಣೀರು’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಬಿ. ಸಿ. ಅನಿತಾಕುಮಾರಿ ಮಾತನಾಡಿ, ಹೆಣ್ಣಿನ ಮೇಲೆ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇಂತಹ ಘಟನೆಗಳು ಇಂದಿಗೂ ನಡೆಯು ತ್ತಿದ್ದು, ಶೋಷಣೆಯನ್ನು ತಪ್ಪಿಸಲು ತಾಯಂದಿರು ಜಾಗೃತರಾಗ ಬೇಕು. ಅಲ್ಲದೆ ಮನೆಯಿಂದಲೇ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕು, ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಬೇಕು ಎಂದರು. ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ಜಿಲ್ಲಾಧ್ಯಕ್ಷೆ ಜಾóಕಿಯ ಹುರೈರ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಡಾಕ್ಟ್‍ರ್, ಇಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದು, ದೇಶಸೇವೆಗಾಗಿ ಮಕ್ಕಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಹಿಳೆಯರು ತ್ಯಾಗಮೂರ್ತಿ ಗಳಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ವಿಭಾಗೀಯ ಅಧ್ಯಕ್ಷೆ ನಾಸಿರ, ಟ್ರೈಕಲರ್ ಅಕಾಡೆಮಿಯ ನಿರ್ದೇಶಕಿ ಮೋಕ್ಷಿತಾ ಪಟೇಲ್, ಪ್ರಮುಖರಾದ ಡಾ.ನೌಷಿಯ ಝಿಯಾದ್ದೀನ್, ಲಮ್ಯ ಅಹಮದ್, ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರುಗಳಾದ ಶಹಲ, ಕುರ್ಷಿದ್ ಬಾನು ಮತ್ತಿತರರು ಉಪಸ್ಥಿತರಿದ್ದರು.ಕುಶಾಲನಗರ : ಕುಶಾಲನಗರ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು.

ಸಂಘದ ಆವರಣದಲ್ಲಿ ಅಧ್ಯಕ್ಷರಾದ ಸೆಲಿನ ಡಿಕುನ್ನ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವೈದ್ಯರಾದ ಡಾ.ಹರಿ.ಎ.ಶೆಟ್ಟಿ ಅವರು ಮಹಿಳಾ ದಿನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಪ್ರಕೃತಿ ವಿಕೋಪ ಸಂತ್ರಸ್ತರಾದ ಎರಡು ಮಹಿಳೆಯರಿಗೆ ಸಂಘದ ವತಿಯಿಂದ ಎರಡು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಕಳೆದ 6 ತಿಂಗಳ ಅವಧಿಯಲ್ಲಿ ಮಹಿಳೆಯರಿಗೆ ಉಚಿತ ತರಬೇತಿ ಶಿಕ್ಷಣ ನೀಡಲಾಗಿದೆ ಎಂದು ಅಧ್ಯಕ್ಷೆ ಸಲಿನಾ ತಿಳಿಸಿದರು. ಮಹಿಳೆಯರಿಗೆ ಸಂಘದ ಆವರಣದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಉಪಾಧ್ಯಕ್ಷೆ ಎನ್ ಎ ಸುಶೀಲಾ, ಕಾರ್ಯದರ್ಶಿ ಬಿ.ಆರ್.ಶೈಲಾಕುಮಾರಿ ಸಂಘದ ಸರ್ವ ನಿರ್ದೇಶಕರು, ಶಿಕ್ಷಕಿಯರು ಇದ್ದರು.

ಸೋಮವಾರಪೇಟೆ : ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ದಿನದ ಅಂಗವಾಗಿ ಶಾಲೆಯ ಶಿಕ್ಷಕರುಗಳಿಗೆ ಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಕವಿತಾ ಮಾತನಾಡಿ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದು, ದೇಶದ ರಕ್ಷಣಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವದು ಶ್ಲಾಘನೀಯ. ಮಹಿಳೆಯರು ಸುಶಿಕ್ಷಿತರಾದಲ್ಲಿ ಸಾಮಾಜಿಕವಾಗಿ ಉನ್ನತಿ ಕಾಣಬಹುದು ಎಂದು ಅಭಿಪ್ರಾಯಿಸಿದರು. ಶಾಲಾ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಆಯೋಜಿಸಿದ್ದ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಶಿಕ್ಷಕಿ ಶಮಂತ ಪ್ರಥಮ, ಪಾರ್ವತಿ ದ್ವಿತೀಯ, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸುಮತಿ ಪ್ರಥಮ, ರಮ್ಯ ದ್ವಿತೀಯ ಸ್ಥಾನಗಳಿಸಿದರು. ವಿಜೇತ ಶಿಕ್ಷಕರಿಗೆ ವಿದ್ಯಾರ್ಥಿಗಳು ಬಹುಮಾತ ವಿತರಿಸಿದರು.