ವೀರಾಜಪೇಟೆ, ಮಾ. 11: ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳಿಗೆ ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.
ವೀರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಶಿಶು ಕಲ್ಯಾಣ ಇಲಾಖೆ- ನಬಾರ್ಡ್ ಯೋಜನೆಯಿಂದ ರೂ.7,97 ಲಕ್ಷದಲ್ಲಿ ನಿರ್ಮಾಣಗೊಂಡ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಬೋಪಯ್ಯ ಅವರು ಇತ್ತೀಚೆಗೆ ಸರಕಾರ ಮಹಿಳೆಯರಿಗಾಗಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿರುವದರಿಂದ ಅದು ಸರಿಯಾದ ರೀತಿಯಲ್ಲಿ ಬಡ ಕೂಲಿ ಕಾರ್ಮಿಕರಿಗು ಹಾಗೂ ಇತರ ಮಹಿಳೆಗೂ ದೊರಕುವಂತಾಗಬೇಕು ಹಾಗೂ ಈ ನೂತನ ಅಂಗನವಾಡಿ ಗ್ರಾಮಸ್ಥರಿಗೆ ಸದುಪಯೋಗವಾಗಲಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ ಅಂಗನವಾಡಿ ಕಟ್ಟಡ ಪುಟ್ಟ ಮಕ್ಕಳಿಗೆ ಎಲ್ಲಾ ಸೌಲಭ್ಯಗಳುಳ್ಳ ಕೇಂದ್ರವಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಭ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪೊನ್ನಣ್ಣ, ಕೆದಮುಳ್ಳೂರು ಗ್ರಾ.ಪಂ.ಸದಸ್ಯ ಕಿರಣ್ ಕುಮಾರ್, ಗ್ರಾಮಸ್ಥರಾದ ಅಪ್ಪುಣ, ಮೂಳೇರ ಪ್ರಥಪ್, ಎ.ಎನ್. ತನು ಅಪ್ಪಯ್ಯ, ಜನಾರ್ದನ ರೈ, ವೀರಾಜಪೇಟೆ ಪ.ಪಂ.ಮಾಜಿ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಎಂ.ಆರ್.ಮಿನಾಕ್ಷಿ ನಿರೂಪಿಸಿದರೆ, ಮಾಯಮ್ಮ ವಂದಿಸಿದರು.