ಮಡಿಕೇರಿ, ಮಾ. 11: ಐಕೊಳ ಗ್ರಾಮದ ಅಯ್ಯಪ್ಪ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ತಾ. 14ರ ಸಂಜೆ 6.30ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವದು. ಸಂಜೆ 7 ಗಂಟೆಗೆ ಅಂದಿ ಬೆಳಕು ಹಾಗೂ ತಾ. 15ರಂದು ಬೆಳಿಗ್ಗೆ ದೇವರ ನೃತ್ಯ ನೆರ್ಪು ಪೂಜೆ ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ತಾ. 16ರಂದು ಬೆಳಿಗ್ಗೆ 11 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ, ದೇವರ ಜಳಕ ನೆರವೇರಲಿದೆ. ತಾ. 17ರಂದು ಸಂಜೆ 7 ಗಂಟೆಗೆ ಅಯ್ಯಪ್ಪ ಮತ್ತು ಚಾಮುಂಡಿ ಕೋಲ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.