ಮಡಿಕೇರಿ, ಮಾ. 10: ಪ್ರಸಕ್ತ(2018-19) ಸಾಲಿಗೆ ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿಯಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (6-8 ನೇ ತರಗತಿಗೆ) ವೃಂದದ ಒಟ್ಟು 10,611 ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಜಿಲ್ಲಾಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಒಟ್ಟು 82 ಹುದ್ದೆಗಳು (ಆಂಗ್ಲಭಾಷೆ 40 ಹುದ್ದೆ, ಗಣಿತ-ವಿಜ್ಞಾನ 39 ಹುದ್ದೆ ಹಾಗೂ ಸಮಾಜ ವಿಜ್ಞಾನ 3 ಹುದ್ದೆ) ಖಾಲಿ ಇರುತ್ತದೆ. ಪದವಿ ಮತ್ತು ಡಿ.ಇಡಿ/ಬಿ/ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‍ಸೈಟ್ sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ಒದಗಿಸಲಾಗಿರುವ ಠಿsಣಡಿ.ಛಿಚಿಛಿoಟಿಟiಟಿe.iಟಿ ಮೂಲಕ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಾ. 20 ಕೊನೆಯ ದಿನವಾಗಿದೆ.

ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್‍ಸೈಟ್ sಛಿhooಟeಜuಛಿಚಿಣioಟಿ. ಞಚಿಡಿ.ಟಿiಛಿ.iಟಿ ನಲ್ಲಿ ವೀಕ್ಷಿಸಬಹುದು ಅಥವಾ ಉಪ ನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ ಇಲ್ಲಿಯ ನೋಡಲ್ ಅಧಿಕಾರಿ ಕಾಶಿನಾಥ್ ಮೊಬೈಲ್: 9449704858 ನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪೆರಿಗ್ರಿನ್ ಎಸ್. ಮಚ್ಚಾಡೋ ತಿಳಿಸಿದ್ದಾರೆ.