ಶನಿವಾರಸಂತೆ, ಮಾ. 10: ಸಮೀಪದ ಗುಡುಗಳಲೆಯ ಹ್ಯೂಮನ್ ಹೆರಿಟೇಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಕುಮಾರಧಾರ ಬೆಟ್ಟದ ಮೇಲಿನ ದೇವಾಲಯಕ್ಕೆ ರೂ. 89 ಸಾವಿರ ಮೌಲ್ಯದ ಕಮಾನನ್ನು ನಿರ್ಮಿಸಲಾಗಿದೆ. ಟ್ರಸ್ಟ್‍ನ 43 ಮಂದಿ ಸ್ವಯಂ ಸೇವಕರು ಬೆಟ್ಟದ ಮೇಲೇರಿ ಹೋಗಿ ಕಬ್ಬಿಣದಿಂದ ನಿರ್ಮಿಸಿದ ಕಮಾನನ್ನು ಅಳವಡಿಸಿದರು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷ ವಸಂತ್, ಕಾರ್ಯದರ್ಶಿ ಮಂಜುನಾಥ್ ಹಾಗೂ ಸದಸ್ಯರು ಹಾಜರಿದ್ದರು.