ಶನಿವಾರಸಂತೆ, ಮಾ. 10: ಜನಸೇವೆಯಲ್ಲಿ ರಕ್ತದಾನವೂ ಒಂದಾಗಿದ್ದು, ಮತ್ತೊಬ್ಬರ ಜೀವ ಉಳಿಸುವ ಕಾರ್ಯ ಮಹತ್ತರ ವಾದುದು ಎಂದು ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ಮಸ್ಜಿದುನ್ನೂರ್ ಖತೀಬ ಬಹು ಮುಹಮ್ಮದ್ ಫೈಝಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ನೂರ್ ಯೂತ್ ಅಸೋಸಿಯೇಶನ್ ಬ್ಲಡ್‍ಹೆಲ್ಪ್ ಲೈನ್ ಕರ್ನಾಟಕ ಹಾಗೂ ಹಾಸನ ರಕ್ತನಿಧಿ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆರೋಗ್ಯದಿಂದ ಮಾನಸಿಕ ನೆಮ್ಮದಿಯನ್ನು ಹೊಂದಬಹುದು ಎಂದರು. ಬ್ಲಡ್‍ಹೆಲ್ಪ್‍ಲೈನ್ ಕರ್ನಾಟಕದ ನಿರ್ವಾಹಕ ಅಶ್ರಪ್ ಅರಬಿ ಕಲ್ಲಡ್ಕ, ಜಿಲ್ಲಾ ಇಂಟಿಗ್ರೇಟರ್ ಡಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಡಾ. ಉದಯಕುಮಾರ್, ರೆ. ಫಾದರ್ ಫ್ರಡಿ ಚೆರಿಯನ್, ಟಿಪ್ಪು ಯುವಕ ಸಂಘದ ಅಧ್ಯಕ್ಷ ಔರಂಗ್ ಜೇಬ್ ಹಾಗೂ ಪಿಎಸ್‍ಐ ಸಿ.ಎಂ. ತಿಮ್ಮಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಡ್‍ಹೆಲ್ಪ್ ಲೈನ್ ಕರ್ನಾಟಕ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಬಿರದಲ್ಲಿ 130 ಮಂದಿ ಸಾರ್ವ ಜನಿಕರು ರಕ್ತದಾನ ಮಾಡಿದರು. ಮಸ್ಜಿದುನ್ನೂರು ಅಧ್ಯಕ್ಷ ಡಿ.ಎ. ಸುಲೈಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಹನೀಪ್, ತಜಲ್ಲಿಯಾತ್ ಅರಬಿಕ್ ಶಾಲೆ ಪ್ರಾಂಶುಪಾಲ ಮಜೀದ್ ಮುಸ್ಲಿಯಾರ್, ಉಪನ್ಯಾಸಕ ಝಹೀರ್, ಜಾಮಿಯ ಮಸ್ಜಿದ್ ಕಾರ್ಯದರ್ಶಿ ಕೆ.ಎಂ. ತಸ್ವರ್ ಹುಸೇನ್ ನೂರ್, ಯೂತ್ಸ್ ಅಧ್ಯಕ್ಷ ಅಬ್ದುಲ್ ಬಾಸಿತ್ ಹಾಜಿ, ರಕ್ತನಿಧಿ ಅಧಿಕಾರಿ ಕಾಂತ್‍ರಾಜ್, ಗ್ರಾ.ಪಂ. ಉಪಾಧ್ಯಕ್ಷ ಬಿ.ಎ ಅಹಮ್ಮದ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಯತೀಶ್‍ಕುಮಾರ್, ಕರವೇ ಅಧ್ಯಕ್ಷ ಡಿ.ಪಿ. ಭೂಪಾಲ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮಣ್ಣ ಹಾಗೂ ಬ್ಲಡ್‍ಹೆಲ್ಪ್‍ಲೈನ್ ಕರ್ನಾಟಕ ಕಾರ್ಯಕರ್ತರು ಉಪಸ್ಥಿತರಿದ್ದರು.