ಶನಿವಾರಸಂತೆ, ಮಾ. 10: ಸಮೀಪದ ಗಡಿಭಾಗ ನಿಂಗಾಪುರ ಗ್ರಾಮದಲ್ಲಿ ಬಸವೇಶ್ವರ ನಿರ್ಮಾಣ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ನೂತನ ದೇವಾಲಯದ ಪ್ರತಿಷ್ಠಾಫನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗಂಗೆ ಪೂಜೆ, ಕುಂಭ ಮೆರವಣಿಗೆ, ಗೋ ಪೂಜೆ, ಗೋಪುರ ಕಲಶ ಸ್ಥಾಪನೆ, ಪ್ರಾಣ ಪ್ರತಿಷ್ಠೆ, ಪ್ರಧಾನ ಹೋಮ, ಮಹಾ ಪೂರ್ಣಾಹುತಿ, ಕದಳಿ ಛೇದನಲ ಮಹಾಬಲಿ ಹಾಗೂ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಯಿತು. ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಉಚ್ಚಂಗಿಯ ವೇದಬ್ರಹ್ಮಶೈವಾಗಮ ಪಂಡಿತ ಯು.ಆರ್. ಶೇಷಾಚಲ ಮತ್ತು ತಂಡದವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ದೇವಾಲಯ ಪ್ರತಿಷ್ಠಾಪನೆ ಪ್ರಯುಕ್ತ ಗುರುವಾರ ರಾತ್ರಿ ಗ್ರಾಮಸ್ಥರಿಂದ ಸರ್ವ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಮಹಾಸಂಕಲ್ಪ, ದೇವನಾಂದಿ, ಕಲಶ ಸ್ಥಾಪನೆ, ನವಗ್ರಹ, ಮೃತ್ಯುಂಜಯ, ದ್ವಾದಶ ದೇವತೆಗಳು ಸ್ಥಾಪನೆ, ವೇದ ಪಾರಾಯಣ, ವಾಸ್ತು ರಾಘ್ನೋನ ಹೋಮ, ಪೂರ್ಣಾಹುತಿ, ಅಧಿವಾಸ ಹೋಮ, ವಾಸ್ತು ಬಲಿ, ದಿಗ್ಬಂಧನ, ಮಹಾಪೂಜೆ, ಮಂಗಳಾರತಿ ನಡೆಯಿತು.

ನಿಂಗಾಪುರ, ಈಚಲಬೀಡು, ಹನಸೆ, ಶನಿವಾರಸಂತೆ ಕಳಲೆ, ಚಿನ್ನಳ್ಳಿ, ಹೊಸೂರು ಮತ್ತಿತರ ಗ್ರಾಮಗಳಿಂದ ನೂರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಹಾಸನದ ಆದಿಚುಂಚನಗಿರಿ ಮಹಾಸಂಸ್ತಾನ ಮಠದ ಶಂಭುನಾಥ ಮಹಾಸ್ವಾಮೀಜಿ, ಬಸವೇಶ್ವರ ನಿರ್ಮಾಣ ಸಮಿತಿ ಕಾರ್ಯಕಾರಿ ಮಂಡಳಿ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎನ್.ಡಿ. ಮೋಹನ್, ಖಜಾಂಚಿ, ಎನ್.ಕೆ. ಲೋಕೇಶ್ ಇತರ ಪದಾಧಿಕಾರಿಗಳು, ಕಾಫಿ ಬೆಳೆಗಾರರಾದ ಕೆ.ಬಿ. ಕೃಷ್ಣೇಗೌಡ, ಎನ್.ಕೆ. ಅಪ್ಪಸ್ವಾಮಿ ಇತರರು ಹಾಜರಿದ್ದರು.