ಗೋಣಿಕೊಪ್ಪ ವರದಿ, ಮಾ. 10: ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಪೊನ್ನಂಪೇಟೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ಆಚರಿಸಲಾಯಿತು.

ಅಲ್ಲಿನ ಕಾನೂರು ರಸ್ತೆ ಜಂಕ್ಷನ್‍ನಿಂದ ಮಹಿಳಾ ಸಮಾಜದವರೆಗೆ ಮೆರವಣಿಗೆ ನಡೆಸಲಾಯಿತು. ಪೊನ್ನಂಪೇಟೆ ವ್ಯಾಪ್ತಿಯ ಸಾಯಿ ಶಂಕರ್, ಅರಣ್ಯ ಮಹಾವಿದ್ಯಾಲಯ ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಹಿಳಾ ಸಬಲೀಕರಣ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ಜೆಸಿರೆಟ್ ಅಧ್ಯಕ್ಷೆ ಕಳ್ಳಿಚಂಡ ಸುಮಿ ರಾಬಿನ್, ನಿಕಟಪೂರ್ವ ಅಧ್ಯಕ್ಷ ಮೂಕಳಮಾಡ ನಂಜಪ್ಪ ಹಾಗೂ ನಿರ್ಗಮಿತ ವಲಯ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಉಪಸ್ಥಿತರಿದ್ದರು.