ಮಡಿಕೇರಿ, ಮಾ. 10: ಕನಿಷ್ಟ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲಾ ಗುತ್ತಿಗೆ ನೌಕರರ ಮತ್ತು ಕಾರ್ಮಿಕರ ಸಂಘದ ವತಿಯಿಂದ ಜಿಲ್ಲೆಯಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆಯೆಂದು ಸಂಘÀದ ಅಧ್ಯಕ್ಷ ಪಿ.ಎಸ್. ಭರತ್‍ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳು ಕನಿಷ್ಟ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅಲ್ಲದೆ, ಶೋಷಣೆÉ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಗುತ್ತಿಗೆ ಆಧಾರದ ಸಾವಿರಕ್ಕೂ ಹೆಚ್ಚು ಸದಸ್ಯರು ಕಾರ್ಮಿಕ ಕಾಯ್ದೆಯ ಜಾರಿಯಿಂದ ವಂಚಿತರಾಗಿದ್ದು, ಇವರನ್ನು ಅವಲಂಬಿಸಿರುವ ಸುಮಾರು 10 ಸಾವಿರ ಸದಸ್ಯರು ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಹೊರಗುತ್ತಿಗೆ ಮತ್ತು ಒಳಗುತ್ತಿಗೆ ಆಧಾರದ ನೌಕರರು ಎಂದು ದುಡಿಸಿಕೊಳ್ಳÀಲಾಗುತ್ತಿದೆ. ಆದರೆ, ಸಕಾಲದಲ್ಲಿ ವೇತನ ನೀಡದೆ ಸತಾಯಿಸಲಾಗುತ್ತಿದೆ. 11 ಸಾವಿರ ರೂ.ವೇತನ ನಿಗದಿ ಮಾಡಿ ಕೇವಲ 9 ಸಾವಿರ ರೂ.ಗಳನ್ನು ಮಾತ್ರ ಪಾವತಿ ಮಾಡಲಾಗುತ್ತಿದೆ. ಗುತ್ತಿಗೆ ಆಧಾರದ ನೌಕರರಿಗೆ ಬದುಕಿಗೊಂದು ಭದ್ರತೆ ಬೆÉೀಕಾಗಿದ್ದು, ಹುದ್ದೆಯನ್ನು ಖಾಯಂಗೊಳಿಸುವದು ಅಥವಾ ಕಾರ್ಮಿಕ ಕಾಯ್ದೆಯಂತೆ ಕನಿಷ್ಟ ವೇತನವನ್ನು ನಿಗದಿ ಮಾಡಿ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರ ಸಂಸ್ಥೆಗಳು ನೌಕರಿಯನ್ನು ನೀಡಬೇಕಾದರೆ ತಲಾ 10 ಸಾವಿರ ರೂ.ಗಳಂತೆ ಮುಂಗಡ ಹಣವನ್ನು ಪಡೆಯುವ ಮೂಲಕ ಕಾರ್ಮಿಕ ನೀತಿಯನ್ನು ಉಲ್ಲಂಘಿ ಸುತ್ತಿವೆ. ಪಿಎಫ್‍ನ್ನು ನೀಡದೆ ವಂಚಿಸು ತ್ತಿರುವ ಗುತ್ತಿಗೆದಾರ ಸಂಸ್ಥೆಗಳು ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ವಿರುವ ಮೂಲಭೂತ ಸೌಲಭ್ಯವನ್ನು ಕೂಡ ದೊರಕಿಸಿಕೊಡುತ್ತಿಲ್ಲ ಎಂದು ಭರತ್ ಕುಮಾರ್ ಆರೋಪಿಸಿದರು.

ಇತ್ತೀಚೆಗೆ ಗುತ್ತಿಗೆ ಆಧಾರದ ನೌಕರರು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆÉದಿದ್ದರು. ಇದರ ಪರಿಣಾಮವಾಗಿ ಮುಖ್ಯಮಂತ್ರಿಗಳು ಮಾತುಕತೆಗೆ ಆಹ್ವಾನ ನೀಡಿರುವದಾಗಿ ತಿಳಿಸಿದ ಭರತ್‍ಕುಮಾರ್, ಸದÀ್ಯದಲ್ಲೇ ಮಡಿಕೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವದೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇತರ ಪದಾಧಿಕಾರಿಗಳು ಮಾತನಾಡಿ, ಸರ್ಕಾರದ ಧೋರಣೆಯನ್ನು ಖಂಡಿಸಿದರು. ಉಪಾಧ್ಯಕ್ಷೆ ಜಾಜಿ ಕಾಳಮ್ಮ, ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಧನಲಕ್ಷ್ಮಿ ಹಾಗೂ ನಿರ್ದೇಶಕರಾದ ಭಾಗ್ಯ ಉಪಸ್ಥಿತರಿದ್ದರು.