ಮಡಿಕೇರಿ, ಮಾ. 9 : ಮಾರುಕಟ್ಟೆ ವರ್ತಕರ ಹಿತರಕ್ಷಣಾ ಸಮಿತಿಗೆ ಮಡಿಕೇರಿಯ ನೂತನ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸ್ಥಳ ನೀಡುವಂತಹ ಯಾವದೇ ಅಧಿಕಾರವಿಲ್ಲ ಎಂದು ನಗರಸಭಾ ಆಡಳಿತ ಮಂಡಳಿ ಸದಸ್ಯರಾದ ಹೆಚ್.ಎಂ.ನಂದಕುಮಾರ್ “ಶಕ್ತಿ” ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅನಧಿಕೃತವಾಗಿ ಹಣ ಪಡೆದು ತಮಗೆ ಬೇಕಾದವರಿಗೆ ಮಾತ್ರ ಮಳಿಗೆಗಳನ್ನು, ಸ್ಥಳವನ್ನು ನೀಡುವ ವ್ಯವಹಾರವನ್ನು ನಿನ್ನೆ ದಿನ ನಗರಸಭೆಯಿಂದ ತಡೆಯಲಾಗಿದೆ. ನೈಜ ವರ್ತಕರಿಗೆ ಸಮರ್ಪಕವಾಗಿ ವಿತರಿಸಲಾಗಿದೆ ಎಂದು ಅವರು ತಿಳಿಸಿದರು. ನಂದಕುಮಾರ್ ಅವರ ಈ ಅಭಿಪ್ರಾಯಕ್ಕೆ ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ್ ಆಚಾರ್ಯ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರೂ “ಶಕ್ತಿ” ಯೊಂದಿಗೆ ಮಾತನಾಡಿ ಬಹುತೇಕ ಸಾಮಾನ್ಯ ವರ್ತಕÀರು ನಗರ ಸಭೆ ನೂತನ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಅನುಕೂಲ ಕಲ್ಪಿಸಿದೆ ಎನ್ನುವ ಅಂತರಾಳದ ಕೃತಜ್ಞತೆ ಸಲ್ಲ್ಲಿಸಿದ್ದು ನಿನ್ನೆ ಸ್ಥಳಕ್ಕೆ ತೆರಳಿದ ತಮಗೆ ಅಭಿವÀಂದನೆ ಸಲ್ಲ್ಲಿಸಿದ್ದಾರೆ, ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು. ಈ ಹಿಂದೆಯೂ ಮಾರುಕಟ್ಟೆ ಕಾಮಗಾರಿ ಕಳಪೆಯಾಗಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತ ಅಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ಅನವಶ್ಯಕವಾಗಿ ಹಿತರಕ್ಷಣಾ ಸಮಿತಿ ಮೂಗು ತೂರಿಸಿ ವಿಳಂಬಕ್ಕೆ ಕಾರಣವಾಯಿತು. ತಮ್ಮ ಸ್ವಲಾಭಕ್ಕಾಗಿ ಇಂತಹ ವ್ಯವಹಾರ ನಡೆಸುವವರ ಯಾವದೇ ಸುಳ್ಳು ಆರೋಪಗಳನ್ನು ಪರಿಗಣಿಸದೆ ನಗರ ಸಭೆಯ ಈ ಅಭಿವೃದ್ಧಿ ಕಾರ್ಯದಲ್ಲಿ ವರ್ತಕರು ಸಹಕರಿಸುವಂತೆ ನಂದಕುಮಾರ್ ಕೋರಿದ್ದಾರೆ.

ರಸ್ತೆ: ಗುತ್ತಿಗೆದಾರರಿಂದ ವಿಳಂಬ

ಮಡಿಕೇರಿಯ ಖಾಸಗಿ ಬಸ್ ನಿಲ್ದಾಣ ಚಾಲನೆÀಗೆ ವಿಳಂಬ ಹಾಗೂ ರಾಣಿ ಪೇಟೆಯಂತಹ ಅನೇಕ ರಸ್ತೆಗಳ ದುರಸ್ತಿಯಾಗದಿರುವ ಬಗ್ಗೆ ಪ್ರಶ್ನಿಸಿದಾಗ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತು ನಂದಕುಮಾರ್ ಪ್ರತ್ರಿಕ್ರಿಯಿಸಿದರು. ರಾಜಾಸೀಟು ರಸ್ತೆ, ರಾಣಿಪೇಟೆ ರಸ್ತೆ ಮತ್ತಿತರ ಪ್ರಮುಖ ರಸ್ತೆಗಳ ಸಂಪೂರ್ಣ ರಸ್ತೆ ದುರಸ್ತಿಗೆ ಟೆಂಡರ್ ನೀಡಿ ಸಾಕಷ್ಟ್ಟು ಅವಧಿ ಮೀರಿದೆ. ಹಣ ಬಿಡುಗಡೆಯಾಗಿದೆ. ಆದರೆ, ಟೆಂಡರ್ ಪಡೆದವರು ಸಬ್ ಟೆಂಡರ್ ಅನ್ನು ಕೆಲವರಿಗೆ ನೀಡಿದ್ದು ದುರುದ್ದೇಶ ಪೂರ್ವಕವಾಗಿ ಈ ಕೆಲವು ಗುತ್ತಿಗೆ ದಾರರು ಸಕಾಲದಲ್ಲಿ ಕೆಲಸ ಮಾಡದೆ ವಿಳಂಬ ಮಾಡುತ್ತಿದ್ದಾರೆ. ನೋಟೀಸ್À ಕಳುಹಿಸಿದರೂ ಉತ್ತರಿಸುತ್ತಿಲ್ಲ, ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ಖಾಸಗಿ ಬಸ್ ನಿಲ್ದಾಣವನ್ನು ಬಳಸಿಕೊಳ್ಳಲು ಧಕ್ಕೆಯುಂಟಾಗಿದೆ. ನಿಲ್ದಾಣ ಬಳಕೆಗೆ ಉತ್ತಮ ರಸ್ತೆಯ ಅವಶ್ಯಕತೆಯಿದೆ. ನಿರ್ಲಕ್ಷ್ಯ ಹಾಗೂ ವಿನಾ ಕಾರಣ ವಿಳಂಬ ಮಾಡುತ್ತಿರುವ ಇಂತಹ ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಯವರಿಗೆ ದೂರು ನೀಡುವದರೊಂದಿಗೆ ಅವರಿಗೆ ಹಣ ಪಾವತಿಸದಂತೆಯೂ ತಡೆಯುವ ಅನಿವಾರ್ಯ ಸ್ಥಿತಿ ಒದಗಿದೆ. ಈಗಲಾದರೂ ಈ ಗುತ್ತಿಗೆದಾರರು ಎಚ್ಚೆತ್ತುಕೊಂಡು ತುರ್ತಾಗಿ ಕೆಲಸ ನಿರ್ವಹಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಲಿ ಎಂದು ನಗರಸಭಾ ಆಡಳಿತ ಮಂಡಳಿ ತಾಕೀತು ಮಾಡಿದೆ.