ಸುಂಟಿಕೊಪ್ಪ, ಮಾ. 9: ತನ್ನೊಂದಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಲೆಂದು ಸ್ನೇಹಿತನನ್ನು ಅರಸಿಕೊಂಡು ಬಂದಿದ್ದ ಯುವಕ ನೋರ್ವನ ಬೈಕ್ಗೆ ಪ್ರವಾಸಿ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ದುರ್ಮರಣ ಕ್ಕೀಡಾಗಿರುವ ಘಟನೆ ವರದಿ ಯಾಗಿದೆ. ರಂಗಸಮುದ್ರ ಸಮೀಪದ ವಿರೂಪಾಕ್ಷಪುರದ ರಮೇಶ್ ಎಂಬವರ ಪುತ್ರ ಶಕ್ತಿವೇಲ್ (22) ಎಂಬಾತನೇ ಮೃತ ದುರ್ದೈವಿ ಯಾಗಿದ್ದಾರೆ. ಶಕ್ತಿವೇಲ್ ಈ ಹಿಂದೆ ದುಬಾರೆ ಯಲ್ಲಿ ರಾಫ್ಟಿಂಗ್ ಗೈಡ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದ. ಆದರೆ ದುಬಾರೆಯಲ್ಲಿ ರಾಫ್ಟಿಂಗ್ ಅನ್ನು ಸ್ಥಗಿತಗೊಳಿಸಿದ್ದ ಸಂದರ್ಭ ಶಕ್ತಿವೇಲ್ ಬೇರೆ ಕಡೆಗಳಲ್ಲಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಪಿರಿಯಾಪಟ್ಟಣದ
(ಮೊದಲ ಪುಟದಿಂದ) ಹುಣಸೆವಾಡಿಯಲ್ಲಿ ನಡೆಯುತ್ತಿದ್ದ ರಾಫ್ಟಿಂಗ್ ಗೆ ಗೈಡ್ ಆಗಿ ಸೇರಿಕೊಂಡಿದ್ದು, ಇಂದು ಬೆಳಿಗ್ಗೆ 10 ಗಂಟೆಗೆ ತಾನು ಕೆಲಸ ಮಾಡುತ್ತಿದ್ದ ಹುಣಸೆವಾಡಿಯ ರಾಫ್ಟಿಂಗ್ನಲ್ಲಿ ತನ್ನ ಸ್ನೇಹಿತನಾದ ರಂಗಸಮುದ್ರದ ಅಪ್ಪು ಎಂಬವರಿಗೆ ಕೆಲಸ ಕೊಡಿಸಲೆಂದು ಅವರನ್ನು ಕರೆದುಕೊಂಡು ಹೋಗಲು ಬೈಕ್ನಲ್ಲಿ ದುಬಾರೆಗೆ ಬಂದಿದ್ದಾರೆ. ಆದರೆ ದುಬಾರೆಯಲ್ಲಿ ಸ್ನೇಹಿತ ಅಪ್ಪು ಕಾಣಲು ಸಿಗದ ಕಾರಣ ಕರ್ತವ್ಯದ ಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ದುಬಾರೆಯ ಜಂಕ್ಷನ್ನಲ್ಲಿ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿ ಕಾರು ಶಕ್ತಿವೇಲ್ ಬೈಕ್ಗೆ ಅಪ್ಪಳಿಸಿದೆ. ಇದರಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಶಕ್ತಿವೇಲ್ ಸ್ಥಳದಲ್ಲಿಯೇ ಅಸು ನೀಗಿದ್ದಾನೆ. ಮೃತ ಶಕ್ತಿವೇಲ್ ಅವಿವಾಹಿತ ನಾಗಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.