ಭಾಗಮಂಡಲ, ಮಾ. 9: ಮಳೆಗಾಗಿ ತಲಕಾವೇರಿಯಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧೆÉಡೆ ತಿಂಗಳ ಹಿಂದೆ ಮಳೆ ಸುರಿದಿದ್ದು, ಭಾಗಮಂಡಲ- ತಲಕಾವೇರಿ ವ್ಯಾಪ್ತಿಯಲ್ಲಿ ಮೊದಲ ಮಳೆ ಆಗದ ಹಿನ್ನೆಲೆಯಲ್ಲಿ ಐದು ಗ್ರಾಮಗಳ ಗ್ರಾಮಸ್ಥರು ಶನಿವಾರ ತಲಕಾವೇರಿಯಲ್ಲಿ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರು ಗೋವಿಂದ ನಾಮಸ್ಮರಣೆಯನ್ನು ಮಾಡುತ್ತಾ ಬ್ರಹ್ಮಗಿರಿ ಶಿಖರವನ್ನೇರಿದರು.ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಮಳೆ ಸುರಿಯುವದು ವಾಡಿಕೆ. ಈ ಬಾರಿ ಸುಡು ಬಿಸಿಲಿನ ವಾತಾವರಣ ಇದೆ. ಕೃಷಿಯನ್ನು ನೆಚ್ಚಿ ಬದುಕುವ ಮಂದಿ ಕಾಫಿಯ ಫಸಲಿಗಾಗಿ ಮಳೆಯನ್ನು ಅವಲಂಬಿಸಿದ್ದು ಈ ಅವಧಿಯಲ್ಲಿ ಮಳೆ ಸುರಿಯುವ ಸುಳಿವೇ ಇಲ್ಲದೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಳೆ ಸುರಿಯುವದರ ಮೂಲಕ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.ಪ್ರಮುಖರಾದ ಕುದುಕುಳಿ ಭರತ್, ಸೂರ್ತಲೆ ಚಿಣ್ಣಪ್ಪ, ಕಾಳನ ರವಿ, ಅಮೆ ಪದ್ಮಯ್ಯ, ನಾರಾಯಣಾಚಾರ್, ವಿಠಲಾಚಾರ್, ಯೋಗಾನಂದ, ಪೂಣಚ್ಚ ಹಾಗೂ ಸ್ಥಳೀಯರು ಇದ್ದರು. -ಸುನಿಲ್