ವೀರಾಜಪೇಟೆ, ಮಾ. 9: ವೀರಾಜಪೇಟೆ ಸಮೀಪದ ಬೆಳ್ಳುಮಾಡುವಿನ ಅಡುಕೋಣೆ ಶ್ರೀ ಸಾರ್ತಾವು ದೇವರ ವಾರ್ಷಿಕ ಉತ್ಸವ ತಾ. 14 ರಂದು ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಚಂಗುಲಂಡ ಕುಟುಂಬಸ್ಥರ ಪ್ರಯೋಜಕತ್ವದಲ್ಲಿ ಸಾಮೂಹಿಕ ಉಪಹಾರ, 12 ಗಂಟೆಗೆ ಎತ್ತುಪೋರಾಟ, 1 ಗಂಟೆಗೆ ಮಹಾಪೂಜೆ ಹಾಗೂ 2 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವತಕ್ಕಮುಖ್ಯಸ್ಥ ಚಂಗುಲಂಡ ಕಿಶನ್ ಸುಬ್ಬಯ್ಯ ತಿಳಿಸಿದ್ದಾರೆ.