ಸುಂಟಿಕೊಪ್ಪ, ಮಾ.9: ಐಗೂರು ಗ್ರಾಮದ ಕಾಫಿ ತೋಟಕ್ಕೆ ಆಹಾರ ಅರಸಿ ಬರುವ ಕಾಡಾನೆ ಕಾಫಿ ಗಿಡಗಳನ್ನು ನಾಶಪಡಿಸಿ ಬಾಳೆ ಹಾಗೂ ತೆಂಗಿನ ಗಿಡವನ್ನು ತಿಂದು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಐಗೂರಿನ ಕಾಳೇರಮ್ಮನ ಜಯಕಾಂತ, ಕುಮಾರ, ಸಂಜಯ್, ಇವರುಗಳ ತೋಟಗಳಿಗೆ ರಾತ್ರಿವೇಳೆ ಒಂಟಿ ಸಲಗ ಆಹಾರ ಅರಸಿ ಬಂದು ಸಿಕ್ಕ ಬಾಳೆಗಿಡ, ತೆಂಗು, ಅಡಿಕೆ ಗಿಡಗಳನ್ನು ತಿಂದು ನಾಶಪಡಿಸಿವೆ. ರಾತ್ರಿ ತೋಟಕ್ಕೆ ಲಗ್ಗೆಯಿಟ್ಟು ಬೆಳಗ್ಗಿನ ಜಾವ ಕಾಡಿಗೆ ಹಿಂತೆರಳುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.