ಸೋಮವಾರಪೇಟೆ, ಮಾ. 9: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಜಿಲ್ಲಾ ಮಟ್ಟದ ಅತ್ಯುತ್ತಮ ವೀಡಿಯೋಗ್ರಫಿ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನರಾದ ಚಿತ್ತಾರ ವಾಹಿನಿಯ ವರದಿಗಾರ, ತಾಲೂಕಿನ ಕುಂಬೂರು ಗ್ರಾಮದ ವಿಶ್ವ ಅವರನ್ನು ಕುಂಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ವಿಶ್ವ ಅವರನ್ನು ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ರಾಜಣ್ಣ, ಶಿಕ್ಷಕರುಗಳಾದ ಸರಳಾಕುಮಾರಿ, ಉದಯ, ಸಿಸಿಲಿಯಾ ಜೆಸ್ಸಿ, ಪುಷ್ಪಲತಾ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಶಶಿಕಲ, ಹಿತಾಕ್ಷಿ, ಈರಪ್ಪ ಸೇರಿದಂತೆ ವಿದ್ಯಾರ್ಥಿಗಳು ಫಲತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.