ವೀರಾಜಪೇಟೆ, ಮಾ. 8: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಮೂರು ಹಂದಿ ಮಾಂಸ ಮಳಿಗೆ, ಹಸಿ ಮೀನು ಮಳಿಗೆಗಳು ಹಾಗೂ ವಾಹನ ಶುಲ್ಕ ಎತ್ತಾವಳಿ, ಅಂಗಡಿ ಮಳಿಗೆಗಳಿಂದ ಈ ಬಾರಿ ಪಟ್ಟಣ ಪಂಚಾಯಿತಿಗೆ ಒಟ್ಟು ರೂ. 79,26,200 ಆದಾಯ ಬಂದಿದ್ದು ಹಸಿ ಮೀನು ಮಳಿಗೆಗಳಿಂದ ರೂ. 66,05,200 ಅಧಿಕ ಆದಾಯ ದೊರೆತು ಮೊಟ್ಟ ಮೊದಲ ಬಾರಿಗೆ ಏಳು ವರ್ಷಗಳಲ್ಲಿ ಈ ವರ್ಷ ದಾಖಲೆಯನ್ನು ನಿರ್ಮಿಸಿದೆ.
ಪಟ್ಟಣ ಪಂಚಾಯಿತಿಗೆ ಸೇರಿದ ಹಸಿ ಮೀನು, ಹಂದಿ ಮಾಂಸ, ವಾಹನ ಶುಲ್ಕ ಎತ್ತಾವಳಿ. ಸಂತೆ ಸುಂಕ ಅಂಗಡಿಯ ಬಾಡಿಗೆ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ಹಸಿ ಮೀನು ಮಳಿಗೆಗಳ ಹರಾಜಿನ ಸಂದರ್ಭದಲ್ಲಿ ಬಿಡ್‍ದಾರರು, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿ, ಆಡಳಿತಾಧಿಕಾರಿಗಳ ನಡುವೆ ಹತ್ತು ನಿಮಿಷಗಳ ಕಾಲ ಗಂಭೀರವಾದ ಚರ್ಚೆ ನಡೆದಾಗ ಪೊಲೀಸರು ಮಧ್ಯ ಪ್ರವೇಶಿಸುವಂತಾಯಿತು. ನಂತರ ಮತ್ತೆ ಹರಾಜನ್ನು ಮುಂದುವರೆ ಸಲಾಯಿತು.
ಸುಣ್ಣದ ಬೀದಿಯಲ್ಲಿ ನಿರ್ಮಾಣವಾಗುತ್ತಿರುವ ಮತ್ಸ್ಯ ಭವನದ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಹಸಿ ಮೀನು ಮಳಿಗೆಗಳ ಹರಾಜನ್ನು ತಡೆಯಬೇಕು ಎಂದು ಕೆಲವು ಬಿಡ್‍ದಾರರು, ಪಟ್ಟಣ ಪಂಚಾಯಿತಿ ಸದಸ್ಯರು ಆಡಳಿ ತಾಧಿಕಾರಿಯನ್ನು ಒತ್ತಾಯಿಸಿದರೂ ಮಾರ್ಚ್ 31 ರೊಳಗೆ ಮತ್ಸ್ಯಭವನದ ಕಾಮಗಾರಿ ಪೂರೈಸುವದಾಗಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ನೀಡಿದ ಭರವಸೆ ಮೇರೆ ಅಧಿಕ ಸಂಖ್ಯೆಯ ಬಿಡ್‍ದಾರರು ಹರಾಜನ್ನು ಮುಂದುವರೆಸುವಂತೆ ಆಗ್ರಹಿಸಿದ ಮೇರೆ ಪೊಲೀಸ್ ಬಂದೋಬಸ್ತ್‍ನಲ್ಲಿ ಹರಾಜು ಪ್ರಕ್ರಿಯೆ ಮುಂದುವರೆಯಿತು.
ಕೋಳಿ ಹಾಗೂ ಕುರಿ ಮಾಂಸಕ್ಕೆ ಸೂಕ್ತವಾದ ಸ್ಥಳವಿಲ್ಲದ್ದರಿಂದ ಕಳೆದ ವರ್ಷದಂತೆ ಈ ಎರಡು ಉದ್ಯಮಗಳಿಗೆ ಹಿಂದಿನಂತೆಯೇ ವಾರ್ಷಿಕ ಪರವಾನಗಿ ನೀಡುವಂತೆ ಪಟ್ಟಣ ಪಂಚಾಯಿತಿ ತೀರ್ಮಾನಿಸಿತು. ಕಳೆದ 2016-17ಕ್ಕೆ ರೂ. 5,19,400, 2017-18 ರಲ್ಲಿ ರೂ. 4,29,350, 2018-19 ರಲ್ಲಿ ರೂ. 4,31,000, 2019-20ರಲ್ಲಿ ರೂ. 79,26,200 ಮೂರು ಹಂದಿ ಮಾಂಸ ಮಳಿಗೆ, ವಾಹನ ಸುಂಕ ಎತ್ತಾವಳಿ ಸಂತೆ ಸುಂಕದಿಂದ ಒಟ್ಟು ರೂ. 7926200 ಆದಾಯ ಬಂದಿದೆ. ಹಸಿ ಮೀನು ಮಾರಾಟಕ್ಕೆ ಮಾರುಕಟ್ಟೆಯ ಅಭಾವದಿಂದಾಗಿ ಕಳೆದ ಏಳು ವರ್ಷಗಳಿಂದ ಹರಾಜು ಸ್ಥಗಿತ ಗೊಂಡಿತ್ತು. ಮುಂದಿನ ವರ್ಷ ನೂತನ ಮಾರುಕಟ್ಟೆಯ ಸೌಲಭ್ಯ ದೊಂದಿಗೆ ಕುರಿ ಹಾಗೂ ಕೋಳಿ ಮಾಂಸದ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗುವದು ಎಂದು ಅಧಿಕಾರಿಗಳು ತಿಳಿಸಿದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಬಿ.ಎಂ. ಗೋವಿಂದ ರಾಜು, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಅಭಿಯಂತರ ಎನ್.ಪಿ. ಹೇಮ್ ಕುಮಾರ್, ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು. ಸುಮಾರು 66 ಮಂದಿ ಬಿಡ್‍ದಾರರು ಭಾಗವ ಹಿಸಿದ್ದರು. ಹಸಿ ಮೀನು ಮಳಿಗೆಗಳಿಗೆ ಬಿಡ್‍ದಾರರ ನಡುವೆಯೇ ಭಾರೀ ಪೈಪೋಟಿ ನಡೆದುದರಿಂದ ಪಟ್ಟಣ ಪಂಚಾ ಯಿತಿಗೆ ನಿರೀಕ್ಷೆಗೂ ಮೀರಿ ಆದಾಯ ಬರಲು ಕಾರಣವಾಯಿತು. ಪಟ್ಟಣ ಪಂಚಾಯಿತಿಯ ಪುರಭವನದ ಸುತ್ತ ಬೆಳಿಗ್ಗೆ 9.30 ಗಂಟೆಯಿಂದಲೇ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.