ಸಿದ್ದಾಪುರ, ಮಾ. 7: ನೆಲ್ಲಿಹುದಿಕೇರಿ ಸರಕಾರಿ ಶಾಲೆಯ ಸಮೀಪದ ನೂತನ ರಸ್ತೆ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಪರಿಶೀಲನೆ ಮಾಡಿದರು.

ನೆಲ್ಲಿಹುದಿಕೇರಿಯ ಶಾಲೆಯ ಕೆಳಭಾಗದಲ್ಲಿರುವ ವಾರ್ಡ್ 4 ರ ಉಮ್ಮರ್ ಹಾಗೂ ಸುಗು ಅವರ ಮನೆಯ ಮುಂಭಾಗದ ಸಾರ್ವಜನಿಕ ಕಾಂಕ್ರಿಟ್ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು ಈ ಸಂದರ್ಭ ನೆಲ್ಲಿಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಪಿ.ಡಿ.ಓ. ನಂಜುಂಡಸ್ವಾಮಿ ಹಾಜರಿದ್ದರು.