ಶನಿವಾರಸಂತೆ, ಮಾ. 7: ಪಟ್ಟಣದ ಮಂಜುನಾಥ ಸ್ವಾಮಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳಕ್ಕೆ 21ನೇ ವರ್ಷದ ಪಾದಯಾತ್ರೆ ಆರಂಭಿಸಿದರು.

ಸ್ಥಳೀಯ ಚಂದ್ರಮೌಳೇಶ್ವರ-ಪಾರ್ವತಿ-ಗಣಪತಿ ದೇವಾಲಯದಲ್ಲಿ ಪಾದಯಾತ್ರಿಗಳು ಸಂಘಟಿತರಾಗಿ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯ ನೆರವೇರಿಸಿದ ಅರ್ಚಕ ಮಾಲತೇಶ್ ಭಟ್ ಪಾದಯಾತ್ರೆಗೆ ಚಾಲನೆ ನೀಡಿದರು.

ಈ ಬಾರಿಯ ಪಾದಯಾತ್ರೆಯ ವಿಶೇಷವೆಂದರೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿರುವದು. 40 ಮಹಿಳೆಯರು ಹಾಗೂ 80 ಮಂದಿ ಪುರುಷರು ಭಜನೆ, ದೇವರ ದ್ಯಾನದೊಂದಿಗೆ ಪಾದಯಾತ್ರೆ ಸಾಗಿದರು. ಸಮಿತಿಯ ವ್ಯವಸ್ಥಾಪಕ ಎ.ಡಿ. ಮೋಹನ್‍ಕುಮಾರ್, ರಾಜು, ಸಿ.ವಿ. ಜಯಪ್ಪಣ್ಣ, ಕುಮಾರ್, ಅಶೋಕ್, ಹೆಚ್.ಎ. ವೆಂಕಟೇಶ್, ಮಿಥುನ್, ಮಂಜುನಾಥ್ ಪಾದಯಾತ್ರೆಯ ನೇತೃತ್ವ ವಹಿಸಿದ್ದರು.