ಗೋಣಿಕೊಪ್ಪ ವರದಿ, ಮಾ. 7: ಕೊಡಗಿನ ಮೂವರು ನೆರೆ ಸಂತ್ರಸ್ತರಿಗೆ ಗೋಣಿಕೊಪ್ಪ ಕಾವೇರಿ ಮಹಿಳಾ ಸಮಾಜದ ವತಿಯಿಂದ ಸಹಾಯಧನ ವಿತರಿಸಲಾಯಿತು.
ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂವರು ಸಂತ್ರಸ್ತರಿಗೆ ತಲಾ 6 ಸಾವಿರ ನಗದು ವಿತರಣೆ ಮಾಡಲಾಯಿತು. ಈ ಸಂದರ್ಭ ಕಾವೇರಿ ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೇರ ಉತ್ತರೆ, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಉಪಾಧ್ಯಕ್ಷೆ ಚೆಂಬಾಂಡ ಮೀನಾ ಅಕ್ಕಮ್ಮ, ಸಲಹೆಗಾರರಾದ ಶಾಂತಿ ಮಾಚಯ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.