ಮಡಿಕೇರಿ, ಮಾ. 7: ಅಂತರಾಷ್ಟ್ರೀಯ ದಂತ ವೈದ್ಯಕೀಯ ಶಿಕ್ಷಣ ತಜ್ಞರ ಸಂಘ, ಕೊಡಗು ದಂತ ವೈದ್ಯಕೀಯ ಕಾಲೇಜು ವೀರಾಜಪೇಟೆ ಸಹಯೋಗ ದೊಂದಿಗೆ ಮೂರನೆ ವಾರ್ಷಿಕ ದಂತ ವಿಜ್ಞಾನ ವಿಚಾರಗೋಷ್ಠಿ “ಕ್ವೆಸ್ಟ್-3” ನಡೆಯಿತು.
ಯು.ಎ.ಯಿ. ಶಾರ್ಜ ವಿಶ್ವವಿದ್ಯಾನಿಲಯದ ಪ್ರೊ. ಲಕ್ಷ್ಮಣ ಸಮರನಾಯಕೆ, ಜಪಾನಿನ ಸುರುಮಿ ವಿಶ್ವವಿದ್ಯಾನಿಲಯದ ನಿರ್ದೇಶಕ ಮಂಡಳಿಯ ಪ್ರೊ. ಸತೊಷಿ ನಾಗಾಸಾಕ, ಥಾಯ್ಲ್ಯಾಂಡ್ನ ಚಿಯಾಂಗ್ಮಾಯಿ ವಿಶ್ವ ವಿದ್ಯಾನಿಲಯದ ಡಾ. ಧಿರಾವತ್ ಜೋತಿಕಾಸ್ತಿರ ಹಾಗೂ ಯ.ಎಸ್. ಎಟೆಕ್ಸಾಸ್ ಎ&amdiv;ಎಂ ಕಾಲೇಜಿನ ಪ್ರೊ. ರಘುನಾಥ್ ಪುಟ್ಟಯ್ಯ ಹಾಗೂ ಇತರ ಪ್ರಮುಖರು ಪಾಲ್ಗೊಂಡಿದ್ದರು.
ಕೊಡಗು ದಂತ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಡಾ. ಸುನಿಲ್ ಮುದ್ದಯ್ಯನವರು ಮಾತನಾಡಿ, ರಾಷ್ಟ್ರವು ವಿಶ್ವದಲ್ಲೆ ಶೈಕ್ಷಣಿಕ ಸಂಸ್ಥೆಗಳ ವಿಸ್ತಾರವಾದ ಜಾಲವನ್ನು ಹೊಂದಿದ್ದರೂ, ಅಂತರ್ರಾಷ್ಟ್ರೀಯ ಮಟ್ಟದ ಸಂಶೋಧನೆಯಲ್ಲಿ ಅದರ ಪಾತ್ರ ಮತ್ತು ನ್ಯೂನತೆಗಳು ಈ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲು ಪ್ರೇರಣೆ ನೀಡಿದವು ಎಂದರು. ಪ್ರತಿ ವರ್ಷದಿಂದ ಒಟ್ಟಾಗಿ ಸುಮಾರು 150 ಅಂತರಾಷ್ಟ್ರೀಯ ಮತ್ತು ಸಾವಿರದಷ್ಟು ರಾಷ್ಟ್ರೀಂiÀi ಪ್ರತಿನಿಧಿಗಳು ಪ್ರತಿನಿಧಿಸಿದ್ದು, ವಿಚಾರಗೋಷ್ಠಿಯ ವೈಜ್ಞಾನಿಕ ವಿಚಾರಧಾರೆಯ ಗುಣಮಟ್ಟವು ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ ಎಂದು ಹೇಳಿದರು.
ಬಾಯಿಯ ಸೂಕ್ಷ್ಮಣುಜೀವ ವಿಜ್ಞಾನ ಈ ವರ್ಷದ ವಿಚಾರ ಗೋಷ್ಠಿಯ ಪ್ರಮುಖ ವಿಷಯ ವಾಗಿದ್ದು, ಈ ಕ್ಷೇತ್ರದಲ್ಲಿ ತಜ್ಞ ಪ್ರೊ. ಲಕ್ಷ್ಮಣ ಸಮರನಾಯಕೆ ಮಂಡಿಸಿದರು. ಪ್ರೊ. ರಗುನಾಥ ಪುಟ್ಟಯ್ಯರವರು ಪ್ರತಿಜೀವ ನಿರೋಧಕ ತಳಿಗಳನ್ನು ನಿಯಂತ್ರಿ ಸಲು ಪರಿಣಾಮಕಾರಿ ಪ್ರತಿಜೈವಿಕ ಕಾರ್ಯ ನೀತಿ ವೃದ್ಧಿಪಡಿಸುವ ಯೋಜನೆಯ ಕುರಿತಾಗಿ ತಿಳಿಸಿದರು. ಡಾ. ಧಿರಾವತ್ ಜೋತಿಕಾಸಿರವರು ಸರ್ಜರಿ ಫಸ್ಟ್ ಆರ್ಥೋಡಾಂಟಿಕ್ಸ್ ಕುರಿತಾದ ಹೊಸ ವಿಷಯಗಳ ಬಗ್ಗೆ ಅರಿವನ್ನು ಮೂಡಿಸಿದರು.
ಡಾ. ಅನ್ಮೋಲ್ಕಲ್ಲ್ಹ ಸಂಶೋಧನಾ ಸಲಹೆಗಾರ ಮತ್ತು ಡಾ. ಪೊನ್ನಪ್ಪ ಪ್ರಾಂಶುಪಾಲ, ಡಾ. ಜಿತೇಶ್ ಜೈನ್, ಉಪಪ್ರಾಂಶುಪಾಲ, ಡಾ. ಶಾಂತಲಾ ಬಿ.ಎಂ ಅಸೋಸಿಯೆಟ್ ಡೀನ್ ಆಫ್ ಇಂಟರ್ನ್ಯಾಷನಲ್ ರಿಲೇಷನ್, ಡಾ. ಶಶಿಧರ್ ಅಸೋಸಿಯೆಟ್ ಡೀನ್ ಆಫ್ ರಿಸರ್ಚ್, ವಿದ್ಯಾರ್ಥಿ ಸಂಘದ ವತಿಯಿಂದ ಸಿತಾರ ಮತ್ತು ಶ್ವೇತಾ ಲೆಸ್ಲಿ ಉಪಸ್ಥಿತರಿದ್ದರು.
 
						