ಗೋಣಿಕೊಪ್ಪ ವರದಿ, ಮಾ. 5: ಇಲ್ಲಿನ ಕಾವೇರಿ ಮಹಿಳಾ ಸಮಾಜದಿಂದ ತಾ. 8 ರಂದು ಸಮಾಜದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ.

ಅಂದು ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಅರಂಭಗೊಳ್ಳಲಿದ್ದು, ಆಚರಣೆಯಲ್ಲಿ ಸಾಂಸ್ಕøತಿಕ ಸ್ಪರ್ಧೆ ಹಾಗೂ ಮನರಂಜನಾ ಕ್ರೀಡೆ, ಪಿಕ್ ಅಯಿಂಡ್ ಆಕ್ಟ್ ಸ್ಪರ್ಧೆ ಮಹಿಳೆಯರಿಗೆ ಆಯೋಜಿಸಲಾಗಿದೆ. ಇಬ್ಬರು ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ಮಹಿಳಾ ಸಮಾಜ ಅಧ್ಯಕ್ಷೆ ಕಟ್ಟೇರ ಉತ್ತರೆ ತಿಳಿಸಿದ್ದಾರೆ.