ಗೋಣಿಕೋಪ್ಪಲು, ಮಾ. 5: ವೀರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1.25 ಲಕ್ಷ ಹಣವನ್ನು ನೀಡಲಾಯಿತು. ಕೊಡಗು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಚೆಕ್ ನೀಡಲಾಯಿತು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಮೊಹಮದ್ ಶುಹೇಬ್, ಉಪಾಧ್ಯಕ್ಷ ಕನ್ನಡಿಯಂಡ ಎ. ಜುಬೇರ್, ನಿರ್ದೇಶಕರಾದ ಎಸ್.ಹೆಚ್. ಮೈನುದ್ದೀನ್, ಎಂ.ಎಸ್. ಮೊಹಮ್ಮದ್, ಶಫಿ, ಎಂ.ಎ. ಜಿಯಾವುಲ್ಲಾ, ಎಂ.ಎ. ಮೊಹಮ್ಮದ್ ಯೂಸೂಫ್, ಜೆ.ಎಸ್. ಸಮೀವುಲ್ಲಾ, ಎ.ಕೆ. ಜಬೀವುಲ್ಲಾ, ಎಂ.ಎ. ಮನ್ಸೂರ್ ಆಲಿ, ಡಿ. ತಸ್ನಿಂ ಅಕ್ತರ್, ಎಂ.ಪಿ. ಅಲ್ತಾಫ್, ಎಂ.ಕೆ. ನಜೀಬ್, ಅಬ್ದುಲ್ ಸತ್ತಾರ್, ಕೆ.ಎ. ಅಬೂ ಸಾಲೆಹಾ, ಅಬಿದಾ ಬೇಗಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ. ಮುಕ್ತಾರ್ ಅಹಮ್ಮದ್, ವ್ಯವಸ್ಥಾಪಕ ಎಂ.ಜಿ. ಜಾವೀದ್ ಉಪಸ್ಥಿತರಿದ್ದರು.