ನಾಪೋಕ್ಲು, ಮÁ. 5: ಶಿವರಾತ್ರಿ ಪ್ರಯುಕ್ತ ಕೊಡಗಿನ ಕುಲದೈವ, ದಕ್ಷಿಣದ ಗಂಗೆ, ಪಾಪ ವಿನಾಶಿನಿ ಶ್ರೀ ಕಾವೇರಿ ಮಾತೆಗೆ ವ್ರತಾಧಾರಿಗಳಾಗಿ ಭಕ್ತಿ ಸಮರ್ಪಿಸುವ ಮೂಲ ಕಾವೇರಿ ಬೈವಾಡು ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಶ್ರೀ ಕಾವೇರಿ ಬೈವಾಡು ಸಮಿತಿ ವತಿಯಿಂದ 29ನೇ ವರ್ಷದ ಶ್ರೀ ಮೂಲ ಕಾವೇರಿ ಬೈವಾಡು ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ನಾಪೋಕ್ಲು ಹಳೇ ತಾಲೂಕು ಶ್ರೀ ಭಗವತಿ ದೇವಸ್ಥಾನದ ಸಮುದಾಯ ಭವನದಲ್ಲಿ ಗುರುಸ್ವಾಮಿಗಳಾದ ಕೇಲೆಟ್ಟೀರ ನಾಣಯ್ಯ ಅವರ ಸಮ್ಮುಖದಲ್ಲಿ ಪವಿತ್ರ ಕ್ಷೇತ್ರಕ್ಕೆ ತೆರಳುವ ವ್ರತಾಧಾರಿಗಳಿಗೆ ಕಟ್ಟು ತುಂಬಿಸಲಾಯಿತು.

ಸೋಮವಾರ ನಸುಕಿನಲ್ಲಿ ಶ್ರೀ ಭಗವತಿ ದೇವಾಲಯದÀಲ್ಲಿ ಮುಖ್ಯ ಅರ್ಚಕ ಹರೀಶ್‍ಭಟ್ ಶ್ರೀ ಭಗವತಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರÀು. ಈ ಸಂದರ್ಭ ವ್ರತಾಧಾರಿಗಳು ಮಾತೆ ಕಾವೇರಿಯನ್ನು ಸ್ತುತಿಸುವ ಶರಣು ಘೋಷ ಕೂಗಿದರು. ಗುರುಸ್ವಾಮಿ ಬಿದ್ದಂಡ ಪೊನ್ನಣ್ಣ, ಮೂಲ ಕಾವೇರಿ ಬೈವಾಡು ಕಾರ್ಯಕ್ರಮದ ಮಹತ್ವದ ಕುರಿತು ವಿವರಿಸಿದರು.

ಬಳಿಕ ವ್ರತಾಧಾರಿಗಳಾದ ಭಕ್ತರು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ಅಲ್ಲಿಂದ ಭಾಗಮಂಡಲ ಸಂಗಮದಲ್ಲಿ ಸ್ನಾನ ಮುಗಿಸಿ ಶ್ರೀ ಭಗಂಡೇಶ್ವರನ ದರ್ಶನ ಪಡೆದು ಪತ್ತಾಯಕ್ಕೆ ಅಕ್ಕಿ ಹಾಕಿ, ಈಡುಕಾಯಿ ಒಡೆದು ಅಲ್ಲಿಂದ ತಲಕಾವೇರಿ ಸನ್ನಿಧಾನದಲ್ಲಿ ಶ್ರೀ ಕಾವೇರಿ ಮಾತೆಗೆ ಬೈವಾಡನ್ನು ಅಗಸ್ತೇಶ್ವರನ ಸನ್ನಿಧಾನದಲ್ಲಿ ಅರ್ಪಿಸಿದರು. ತಲಕಾವೇರಿಯಲ್ಲಿ ಪುಣ್ಯತೀರ್ಥ ಸ್ನಾನದ ಬಳಿಕ ಸಾಮೂಹಿಕ ಕುಂಕುಮಾರ್ಚನೆ ಯನ್ನು ಮಾಡಿ ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಒಳಿತಿಗಾಗಿ ಪ್ರಾರ್ಥಿಸಿದರು. ಗುರುಸ್ವಾಮಿಗಳಾದ ಬಿದ್ದಂಡ ಪೊನ್ನಣ್ಣ ಹಾಗೂ ಕೇಲೆಟ್ಟಿರ ನಾಣಯ್ಯ ಶ್ರೀ ಕಾವೇರಿ ಬೈವಾಡು ಸಮಿತಿಯ ಅಧ್ಯಕ್ಷ ಪಾಡಿಯಮ್ಮಂಡ ಮುತ್ತಮ್ಮಯ್ಯ, ಸಮಿತಿಯ ಪ್ರಮುಖರಾದ ಬೊಟ್ಟೋಳಂಡ ಗÀಣೇಶ್, ಕೇಲೆಟ್ಟಿರ ಚಿತ್ರಾ ನಾಣಯ್ಯ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು.

- ದುಗ್ಗಳ