ಗುಡ್ಡೆಹೊಸೂರು, ಮಾ. 5: ಹೊಟೇಲ್‍ವೊಂದರ ಕಲುಷಿತ ನೀರು ನೇರವಾಗಿ ಕಾವೇರಿ ನದಿಗೆ ಸೇರುತ್ತಿದ್ದು, ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ರಸ್ತೆಯ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಹೊಟೇಲ್‍ವೊಂದರಿಂದ ಸಂಪೂರ್ಣ ಕಲುಷಿತ ನೀರು ಕಾವೇರಿ ನದಿಗೆ ಹರಿಯಲ್ಪಡುತ್ತಿದೆ. ಈ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಈ ಭಾಗದ ಪಂಚಾಯಿತಿ ಸದಸ್ಯರುಗಳಾದ ಭೀಮಯ್ಯ, ಕಾವೇರಪ್ಪ, ಶಶಿ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನದಿಗೆ ಕಲುಷಿತ ನೀರು ಹರಿಯದÀಂತೆ ತಡೆಯೊಡ್ಡಿದ್ದಾರೆ.

-ಗಣೇಶ್