ಗೋಣಿಕೊಪ್ಪಲು, ಮಾ. 5: ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಕೆಲವು ಯುವಕರಿಗೆ ಬೀಡಿ, ಸಿಗರೇಟು ಮೊದಲಾದ ಮಾದಕ ವಸ್ತುಗಳ ಸೇವನೆಗೆ ಅಡ್ಡೆಯಾಗಿರುವ ಪಟ್ಟಣದ ಕೆಲವು ಕಾಫಿಕ್ಲಬ್, ಬೇಕರಿ ಹಾಗೂ ಗೂಡಂಗಡಿ ಹಾಗೂ ಬೀಡ ಅಂಗಡಿಗಳಿಗೆ ಸಬ್ ಇನ್ಸ್‍ಪೆಕ್ಟರ್ ಶ್ರೀಧರ್ ಮಂಗಳವಾರ ದಾಳಿ ನಡೆಸಿದರು.

ಕಾಫಿ ಹಾಗೂ ಚಹಾ ಅಂಗಡಿಗಳಲ್ಲಿ ಚಹಾ ಜತೆಗೆ ಸಿಗರೇಟು, ಬೀಡಿ ಹಾಗೂ ಹೊಗೆಸೊಪ್ಪುಗಳನ್ನು ಮಾರಾಟ ಮಾಡಿ ಯುವಕರನ್ನು ಮಾದಕ ವಸ್ತುಗಳ ಸೇವನೆಗೆ ಪ್ರೇರಣೆ ನೀಡುತ್ತಿದ್ದ ಕೆಲವು ಚಹಾ ಅಂಗಡಿಗಳ ಮಾರಾಟಗಾರರಿಗೆ ಎಚ್ಚರಿಕೆ ನೀಡಿ ದಂಡ ಹಾಕಿದರು.

ಯುವಕರು ಚಹಾ ಅಂಗಡಿಗಳನ್ನು ಅಡ್ಡೆಮಾಡಿಕೊಳ್ಳ ಬಾರದು. ಚಹಾ ಕುಡಿಯಲು ಬಂದರೂ ಹೆಚ್ಚು ಹೊತ್ತು ಕೂರಬಾರದು. ಚಹಾ ಮಾರಾಟ ಮಾಡುವ ವ್ಯಾಪಾರಸ್ಥರೂ ಯುವಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಬಾರದು. ಒಂದುವೇಳೆ ನಿಯಮ ಮೀರಿದರೆ ವ್ಯಾಪಾರಸ್ಥರ ಮೇಲೆ ಕ್ರಮಕೈಗೊಂಡು ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಲಾಗುವದು ಎಂದು ಎಚ್ಚರಿಕೆಯಿತ್ತರು.

- ಎನ್.ಎನ್.ದಿನೇಶ್