ವೀರಾಜಪೇಟೆ, ಮಾ. 6: ಇತಿಹಾಸದ ಭೂಗರ್ಭದಿಂದ ವಿಜ್ಞಾನದ ಮಹತ್ವ ತಿಳಿದು ಬಂದಿದ್ದು ಇದರಿಂದ ಮಾನವ ಸಮಾಜವು ಇಂದಿಗೂ ಬೆಸುಗೆಯಿಂದ ಸಾಗುತ್ತಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಸಂಘ ಜಂಟಿ ಆಶ್ರಯದಲ್ಲಿ ಕೊಡಗಿನ ಇತಿಹಾಸವನ್ನು ಭೂಗರ್ಭ ಸಂಶೋಧನೆಯಿಂದ ತಿಳಿಯುವ ವಿಷಯ ಕುರಿತು ಏರ್ಪಡಿಸಿದ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆಗೊಳಿಸಿ ಮಾಡಿ ಮಾತನಾಡಿದ ಅವರು ಇತಿಹಾಸವು ಸಮಾಜದ ವಿವಿಧ ಸ್ಥರಗಳಲ್ಲಿ ತನ್ನ ದಿಕ್ಕು ತೋರಿದೆ. ಸಂಸ್ಕøತಿ, ವ್ಯವಹಾರ, ಸಾಮಾಜಿಕ ಮೌಲ್ಯಗಳು, ಆರಾದನೆಗಳು ಮತ್ತು ಶಿಕ್ಷಣದಲ್ಲಿ ಇತಿಹಾಸದ ನೆರಳು ತೋರುತ್ತಾ ಬಂದಿದೆ ಯಾವದೇ ವಿಷಯಗಳನ್ನು ಪ್ರಸ್ತಾವನೆ ಮಾಡುವ ಸಂದರ್ಭದಲ್ಲಿ ಇತಿಹಾಸದ ಒಂದು ಅಂಶವು ಭಾಗಿಯಾಗಿರುತ್ತದೆ ಯಾವದೇ ವಿಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳು ಇತಿಹಾಸದ ಮಹತ್ವವನ್ನು ಅರಿತು ಸಾಗಬೇಕು. ಇತಿಹಾಸದ ಪುಟಗಳಲ್ಲಿ ಅಡಕವಾಗಿರುವ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದಲ್ಲಿ ವಿದ್ಯಾರ್ಥಿ ಜೀವನಕ್ಕೆ ಸಾರ್ಥಕತೆಯ ಬದುಕು ಕಂಡುಕೊಳ್ಳುತ್ತದೆÉ. ದೇಶದಲ್ಲಿ ಗತಿಸಿಹೋದ ಮಹಾತ್ಮರ ಜೀವನ ಶೈಲಿ ಅವರುಗಳು ಮಾಡಿದ ಸಾಧನೆಗಳನ್ನು ವಿದ್ಯಾರ್ಥಿಗಳು ಆದರ್ಶವಾಗಿ ಹೊಂದಿದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಹ ಪ್ರೊ. ಡಾ. ಗಣಪತಿ ಗೌಡ ಅವರು ಮಾತನಾಡಿ ಕೊಡಗಿನಲ್ಲಿ ಪ್ರಾಚೀನ ಸಂಸ್ಕøತಿಯು ಇಂದಿಗೂ ಕಾಣಲು ಸಿಗುತ್ತಿದೆ ಆದರೆ ಪ್ರಾಚೀನ ಸಂಸ್ಕøತಿಯನ್ನು ಅರಿಯಲು ಸಂಶೋಧನೆಗಳಿಂದ ಮಾತ್ರ ಸಾಧ್ಯ ಎಂದರು. ಇತಿಹಾಸದಿಂದ ರಚಿತವಾದ ಹಲವಾರು ಸಾಂಸ್ಕøತಿಕ ನಡೆ ನುಡಿಗಳು ಮೌಲ್ಯಯುತ ಬದುಕು ಕಟ್ಟಿಕೊಡುವಲ್ಲಿ ಸಹಕಾರಿಯಗುತ್ತದೆ ಎಂದು ಹೇಳಿದರು.

ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕ ರುದ್ರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಟಿ.ಕೆ.ಬೊಪ್ಪಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಉಪನ್ಯಾಸಕರಾದ ಚೈತ್ರ, ಸತೀಶ್ ಕುಮಾರ್ ಉಪಸ್ಥಿತರಿದ್ದರು.

ಇತಿಹಾಸ ಉಪನ್ಯಾಸಕ ರುದ್ರ ಸ್ವಾಗತಿಸಿ, ಮದುರ ವಿ.ಪಿ. ಮತ್ತು ಜನಿಫರ್ ನಿರೂಪಿಸಿ, ವಂದಿಸಿದರು.

ಪ್ರಥಮ ದರ್ಜೆ ಕಾಲೇಜೀನ ಬಿ.ಬಿ.ಎಂ. ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕ ವೃಂದದವರು ಹಾಜರಿದ್ದರು. -ಕೆ.ಕೆ.ಎಸ್.