ಚೆಟ್ಟಳ್ಳಿ, ಮಾ. 6: ಸಮೀಪದ ಅಭ್ಯತ್‍ಮಂಗಲ ನ್ಯೂ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 3ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಭದ್ರಾ ಫ್ರೆಂಡ್ಸ್ ಬಂಟ್ವಾಳ ತಂಡವು ರೂ. 25,000 ಸಾವಿರ ನಗದು ಹಾಗೂ ಟ್ರೋಫಿಯೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಡಾಟ್ ರೈಡರ್ಸ್ ಚನ್ನಪಟ್ಟಣ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಾರುತಿ ಫ್ರೆಂಡ್ಸ್ ತಂಡವು ಬ್ರದರ್ಸ್ ದೇವರ್‍ಕೊಲ್ಲಿ ತಂಡವನ್ನು ಮಣಿಸಿ ತೃತೀಯ ಸ್ಥಾನ ಪಡೆದರೆ, ದೇವರ್ ಕೊಲ್ಲಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಪಂದ್ಯಾವಳಿಯ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಭದ್ರಾ ಫ್ರೆಂಡ್ಸ್ ತಂಡದ ರಶೀದ್, ಅತ್ಯುತ್ತಮ ಆಲ್ ರೌಂಡರ್ ಚನ್ನಪಟ್ಟಣ ತಂಡದ ಪುನೀತ್ ಹಾಗೂ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ದೇವರ್‍ಕೊಲ್ಲಿ ತಂಡದ ಬದುರುದ್ದೀನ್ ಪಡೆದುಕೊಂಡರು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಸಾಬು ವರ್ಗೀಸ್, ಮೆಬ್ಯೂಸ್ ಫೌಂಡೇಶನ್ ಪ್ರಮುಖರಾದ ಮಧು ಬೋಪಣ್ಣ, ಮುಸ್ತಫಾ, ರಜಾಕ್, ಕಾಫಿ ಬೆಳೆಗಾರ ಇಂದ್ರಕುಮಾರ್ ಹಾಗೂ ಮತ್ತಿತರರು ಇದ್ದರು.