ನಾಪೋಕ್ಲು, ಮಾ. 3: ಇಲ್ಲಿಗೆ ಸಮೀಪದ ಚೆರಿಯಪರಂಬು ಉರೂಸ್ ಕಾರರ್ಯಕ್ರಮಕ್ಕೆ ಮೊಯಿದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಪಿ.ಹೆಚ್. ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಉದ್ಘಾಟ&divound; Éಯನ್ನು ಚೆರಿಯಪರಂಬು ಖತೀಬ ಅಬ್ದುಲ್ ಮಜೀದ್ ನಈಮಿ ನೆರವೇರಿಸಿದರು.
ಉರೂಸ್ ಅಂಗವಾಗಿ ಸೊಮವಾರ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಿ.ಎ.ಜುಬೇರ್, ಮುಹಮ್ಮದ್ ರಫ್ರನ್ ಆಸ್ರಫಿ,ಇಲ್ಯಾಸ್ ಅಲ್ ಹೈದ್ರೂಸಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಉರೂಸ್ ಅಂಗವಾಗಿ ಪ್ರತಿದಿನ ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ.