ಚೆಟ್ಟಳ್ಳಿ, ಮಾ. 3: ಚೆಟ್ಟಳ್ಳಿಯ ಚೇರಳ ಶ್ರೀಭಗವತಿ ದೇವರ ವಾರ್ಷಿಕ ಉತ್ಸವವು ದೇವಾಲಯದ ಸಂಪ್ರದಾಯದಂತೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಫೆ. 26 ರಿಂದ ಆರಂಭವಾಗಿ ಇಂದು ಚೇರಳ ಶ್ರೀ ಭಗವತಿ ದೇವರ ದೊಡ್ಡ ಹಬ್ಬದ ಪ್ರಯುಕ್ತ ಭಗವತಿದೇವಿಗೆ ಹೂಮಾಲೆ ವಸ್ತ್ರಾಭರಣದೊಂದಿಗೆ ಅಲಂಕರಿಸಿ ಬಿಳಿ ಕುಪ್ಪಸದಟ್ಟಿಯನ್ನು ತೊಟ್ಟಂತಹ ಊರಿನವರೆಲ್ಲ ಒಡ್ಡೋಲಗ ದುಡಿಕೊಟ್ಟ್ ಹಾಡಿನೊಂದಿಗೆ ದೇವತಕ್ಕರ ಮನೆಯಾದ ಚೇರಳತಮ್ಮಂಡ ಆನಂದ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ದೇವತಕ್ಕರಾದ ಚೇರಳತಮ್ಮಂಡ ಆನಂದ ಹಾಗೂ ಊರುತಕ್ಕರಾದ ಕೊಂಗೇಟಿರ ಹರೀಶ್‍ಅಪ್ಪಣ್ಣ ಅವರ ಸಮ್ಮುಖದಲ್ಲಿ ದೇವಾಲಯದ ವಾರ್ಷಿಕೊತ್ಸವದ ವಿಧಿüವಿಧಾನಗಳನ್ನು ಸಂಪ್ರದಾಯ ಬದ್ಧವಾಗಿ ನೆರವೇರಿಸಲಾಯಿತು.