ವೀರಾಜಪೇಟೆ, ಮಾ. 3: ತಿಂಗಳು ಕಳೆದರೂ ಕಸ ವಿಲೇವಾರಿಯಾಗದೆ ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿದೆ ನಗರದ ಹೃದಯ ಭಾಗದಲ್ಲಿರುವ ಕಸದ ರಾಶಿ...!

ವೀರಾಜಪೇಟೆ ನಗರದ ಎಫ್.ಎಂ.ಸಿ ರಸ್ತೆಗೆ ಹೊಂದಿಕೊಂಡಿರುವಂತೆ ಮುಖ್ಯರಸ್ತೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ರಸ್ತೆ ಎಸ್.ಬಿ.ಎಂ. ಬ್ಯಾಂಕ್ ಸಮೀಪದ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ದಿನ ನಿತ್ಯ ಹಲವು ಬಗೆಯ ಕಸ ಬೀಳುತ್ತಿದ್ದು ಇದು ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೆ ಕಿರಿಕಿಯಾಗುತ್ತಿದೆ ಎಂದು ವಾರ್ಡ್ ಸಂಖ್ಯೆ 5 ರ ನಿವಾಸಿಗಳು ದೂರು ನೀಡಿದ್ದಾರೆ. ಸ್ಥಳೀಯರಾದ ಮಾಜಿ ಸೈನಿಕ ಅಚ್ಚಪಂಡ ಪ್ರಕಾಶ್ ಅವರು ಸ್ಥಳದಲ್ಲಿ ಹಾಕಲಾಗಿರುವ ಕಸದ ರಾಶಿಯನ್ನು ತೋರಿ ಒಂದೆಡೆ ಸ್ವಚ್ಛ ಭಾರತದಡಿಯಲ್ಲಿ ಹಲವು ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಯೋಜನೆಗಳು ಅನುಷ್ಠಾನಗೊಂಡರೂ ಕಸದ ಬಗ್ಗೆ ತಿಳುವಳಿಕೆಯ ಜಾಹೀರಾತು ನೀಡಿದರೂ, ಜನಮರಳೋ ಜಾತ್ರೆ ಮರಳೋ ಎಂಬತಾಗಿದೆ ಸ್ಥಳೀಯ ಪಂಚಾಯಿತಿಯ ಕಥೆ. ಸ್ಥಳದಲ್ಲಿರುವ ಕಸ ಕಳೆದ ಐದು ತಿಂಗಳುಗಳಿಂದ ವಿಲೇವಾರಿಯಾಗಿರುವದಿಲ್ಲ ಪ. ಪಂ. ಕಚೇರಿಗೆ ಮತ್ತು ಪಟ್ಟಣ ಪಂಚಾಯಿತಿಯ ವಾರ್ಡಿನ ಸದಸ್ಯರಿಗೆ ಕಸ ವಿಲೇವಾರಿ ಮಾಡುವಂತೆ ಮನವಿ ಮಾಡಿದರು ಇಂದಿನವರೆಗೆ ಕಸ ವಿಲೇವಾರಿಯಾಗದಿರು ವದು ವಿಪರ್ಯಾಸ. ಸ್ಥಳೀಯ ನಿವಾಸಿಗಳಿಗೆ ಹಲವು ಬಗೆಯ ರೋಗ ರುಜಿನಗಳಿಗೆ ಅಹ್ವಾನ ನೀಡುವಂತಾಗಿದೆ ಕಸದ ರಾಶಿಯಲ್ಲಿ ಬೃಹದಾಕಾರವಾಗಿ ಬಳೆದು ನಿಂತ ಮರ ಗಿಡಗಂಟಿಗಳಿಂದ ವಿಷಪೂರಿತ ಹಾವುಗಳು ಸೇರಿಕೊಂಡು ಪಾದಚಾರಿಗಳಿಗೆ ಭಯದ ನೆರಳಲ್ಲಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ ಎಂದರು.

ದರ್ಶನ್ ಎನ್.ಎಸ್. ಅವರು ರಾತ್ರಿ ಪಾಳಯದಲ್ಲಿ ಸಂಚರಿಸಲು ನಾಗರಿಕರಿಗೆ ಕಷ್ಟ ಸಾಧ್ಯವಾಗಿದೆ. ಬೀದಿ ದೀಪವು ಬೆಳಗದೇ ಹಲವು ವರ್ಷಗಳು ಕಳೆದುಹೊಗಿದೆ. ಕತ್ತಲು ಆವರಿಸಿಕೊಂಡು ಅಕ್ರಮ ಚಟುವಟಿಕೆಯ ತಾಣವಾಗಿ ಪರಿಣಮಿಸುತ್ತಿರುವದರಿಂದ ಸ್ಥಳೀಯರು ರಾತ್ರಿಯಲ್ಲಿ ಭೀತಿ ಎದುರಿಸುವಂತಾಗಿದೆ. ಪಟ್ಟಣ ಪಂಚಾಯಿತಿ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಆದರೆ ಮನವಿಗೆ ಪ್ರತಿ ಸ್ಪಂದÉ ದೊರೆತಿಲ್ಲ ಎಂದು ಹೇಳಿದರು. ಕಸ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿಯು ತುರ್ತು ಕ್ರಮ ಜರುಗಿಸಬೇಕು, ಸ್ಥಳೀಯರನ್ನು ರೋಗ ರುಜಿನಗಳಿಂದ ಮುಕ್ತ ಮಾಡುವಂತೆ ಅವರುಗಳು ಒತ್ತಾಯಿಸಿದ್ದಾರೆ. ಸ್ಥಳೀಯರಾದ ಈಶ್ವರ್, ಬಿ.ಸಿ. ಶರೀಫ್, ಜಾಸೀರಾ ಬಾನು, ವರ್ಗಿಸ್, ಮಂಜುನಾಥ್ ಮತ್ತು ಜಿಯಾ ಉಲ್ಲಾ ಹಾಜರಿದ್ದರು.